[ad_1]
10ನೇ ತರಗತಿಯ ಫಲಿತಾಂಶದ ನಂತರ ವೃತ್ತಿ ಯೋಜನೆಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ನಿಮ್ಮ ನಾಳೆಗಳು ಇಂದಿನ ಆಯ್ಕೆ ಮೇಲೆ ಅವಲಂಬಿತವಾಗಿರುತ್ತೆ. ಹಾಗಂತ ಕೋರ್ಸ್ ಆಯ್ಕೆ ಮಾಡಿಕೊಳ್ಳುವಾಗ ಕೆಲ ತಪ್ಪುಗಳನ್ನು ಮಾಡಬೇಡಿ. ಒಂದು ವೇಳೆ ನೀವು ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗುತ್ತೆ.
SSLC ನಂತರ ಯಾವ ಸ್ಟ್ರೀಮ್ ಉತ್ತಮ ಎಂಬ ಗೊಂದಲಕ್ಕೆ ಇಲ್ಲಿದೆ ಪರಿಹಾರ!
ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದೆ. ಇದಾದ ನಂತರ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೊಟ್ಟ ಮೊದಲ ಬಾರಿಗೆ ಕಾಲೇಜಿಗೆ ಹೋಗುತ್ತಾರೆ. ಇವರು 11ನೇ ತರಗತಿ ಅಂದರೆ ಪಿಯುಸಿ ಮೊದಲ ವರ್ಷದಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನದಿಂದ ತಮಗಾಗಿ ಒಂದು ವಿಭಾಗವನ್ನು ಆಯ್ಕೆಮಾಡಿಕೊಳ್ಳಬೇಕಾಗುತ್ತದೆ. ಇದರಲ್ಲಿ ನಿಮಗೆ ಗೊಂದಲವಿದ್ದರೆ, ನಿಮ್ಮ ಉಜ್ವಲ ಭವಿಷ್ಯಕ್ಕೆ ಯಾವ ಕೋರ್ಸ್ ಉತ್ತಮ ಎಂದು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ನಿಮಗಾಗಿ ಸರಿಯಾದ ಮತ್ತು ಉತ್ತಮವಾದ ಸ್ಟ್ರೀಮ್ ಅನ್ನು ಆಯ್ಕೆ ಮಾಡುವ ಮಾರ್ಗಗಳನ್ನು ತಿಳಿದುಕೊಳ್ಳಿ. ಇವುಗಳನ್ನು ಪರಿಗಣಿಸಿ, ನೀವು ನಿಮ್ಮ ಜೀವನಕ್ಕೆ ಉತ್ತಮ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಎಂದಿಗೂ ಈ ಕೆಲ ತಪ್ಪುಗಳನ್ನು ಮಾಡಬೇಡಿ.
ನಿಮ್ಮ ಸಾಮರ್ಥ್ಯದ ಮೇಲೆ ಸ್ಟ್ರೀಮ್ ಆಯ್ಕೆ ಮಾಡಿಕೊಳ್ಳಿ!
ನೀವು ಯಾವ ವಿಷಯವನ್ನು ಅಧ್ಯಯನ ಮಾಡಲು ಇಷ್ಟ ಪಡುತ್ತೀರೋ, ನಿಮ್ಮ ನೆಚ್ಚಿನ ವಿಷಯ ಯಾವುದೋ ಅದಕ್ಕೆ ಸಂಬಂಧಿಸಿದ ಸ್ಟ್ರೀಮ್ ಅನ್ನು ಆಯ್ಕೆ ಮಾಡಿಕೊಳ್ಳಿ. ಅದರಲ್ಲೂ ನಿಮಗೆ ಗೊಂದಲವಿದ್ರೆ ನಿಮ್ಮ ಫಲಿತಾಂಶವನ್ನು ನೋಡಿ, ಯಾವ ವಿಷಯದಲ್ಲಿ ಉತ್ತಮ ಅಂಕಗಳು ಬಂದಿರುತ್ತೋ ಆ ವಿಷಯದಲ್ಲಿ ಉತ್ತಮ ಶಿಕ್ಷಣ ಪಡೆದುಕೊಳ್ಳಿ.
ಒತ್ತಡದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!
ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಪೋಷಕರ ಒತ್ತಡಕ್ಕೆ ಮಣಿದು ತಮಗಿಷ್ಟವಿಲ್ಲದ ಕೋರ್ಸ್ ಆಯ್ಕೆ ಮಾಡಿಕೊಂಡಿರೋದನ್ನು ನೋಡಿದ್ದೇವೆ. ಅಥವಾ ಸ್ನೇಹಿತರು ಯಾವುದೋ ಕೋರ್ಸ್ ಆಯ್ಕೆ ಮಾಡಿಕೊಂಡರು ಎಂದು ಅವರು ಕೂಡ ಆ ವಿಷಯದ ಮೇಲೆ ಆಸಕ್ತಿ ಇಲ್ಲದಿದ್ದರೂ ಆ ಕೋರ್ಸ್ ಕಡೆ ಹೆಚ್ಚು ಒಲವು ಕೊಡ್ತಾರೆ. ಅಂತಹ ತಪ್ಪುಗಳನ್ನು ಮಾಡಬೇಡಿ. ನಿಮ್ಮ ಸಾಮರ್ಥ್ಯ ಮತ್ತು ನಿಮ್ಮ ಇಷ್ಟದ ಮೇಲೆ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಮುಂದಿನ ಶೈಕ್ಷಣಿಕ ಬೆಳವಣಿಗೆ ಕಷ್ಟವಾಗುತ್ತೆ.
ನಿಮ್ಮ ವೃತ್ತಿ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸ್ಟ್ರೀಮ್ ಆಯ್ಕೆ ಮಾಡಿಕೊಳ್ಳಿ!
ವಿದ್ಯಾರ್ಥಿಗಳು ಯಾವುದೇ ಸ್ಟ್ರೀಮ್ ಅನ್ನು ಆಯ್ಕೆ ಮಾಡಿಕೊಳ್ಳುವಾಗ ಆ ಸ್ಟ್ರೀಮ್ನಲ್ಲಿನ ವೃತ್ತಿ ಆಯ್ಕೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಭವಿಷ್ಯದಲ್ಲಿ ಉತ್ತಮ ಉದ್ಯೀಗ ಪಡೆಯಲು ಉತ್ತಮ ಅವಕಾಶವಿರುವ ಮತ್ತು ಉತ್ತಮ ಸಂಬಳ ಸಿಗುವಂತಹ ಮತ್ತು ಮಾರುಕಟ್ಟೆಯಲ್ಲಿ ಹೆಚ್ಚು ಡಿಮ್ಯಾಂಡ್ ಇರುವಂತಹ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ನಿಮಗೆ ಈ ಬಗ್ಗೆ ಅಂದಾಜು ಅಥವಾ ಜ್ಞಾನ ಇಲ್ಲವಾದಲ್ಲಿ ತಜ್ಞರ ಅಥವಾ ಹಿರಿಯರ ಸಲಹೆ ಪಡೆಯುವುದು ಸೂಕ್ತ.
ಶಿಕ್ಷಕರಿಂದ ಸಹಾಯ ಪಡೆಯಿರಿ!
ಕಾಲೇಜಿಗೆ ಪ್ರವೇಶಾತಿ ಪಡೆಯುವ ಮೊದಲು ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಸಹಾಯವನ್ನು ಪಡೆದುಕೊಳ್ಳಬೇಕು. ಏಕೆಂದರೆ ನಿಮಗೆ ಕಲಿಸಿದ ಶಿಕ್ಷಕರು ನಿಮ್ಮ ಸಾಮರ್ಥ್ಯವನ್ನು ಗುರುತಿಸಿರುತ್ತಾರೆ. ಮತ್ತು ಉತ್ತಮ ಸ್ಟ್ರೀಮ್ ಆಯ್ಕೆ ಮಾಡುವಲ್ಲಿ ಅವರು ನಿಮಗೆ ಸರಿಯಾದ ಸಲಹೆಯನ್ನು ನೀಡುತ್ತಾರೆ.
ನಿಮ್ಮ ಬಜೆಟ್ ಅನ್ನು ಮನಸ್ಸಿನಲ್ಲಿಟ್ಟುಕೊಳ್ಳಿ!
ಯಾವುದೇ ಸ್ಟ್ರೀಮ್ ಆಯ್ಕೆ ಮಾಡಿಕೊಳ್ಳುವ ಮೊದಲು ವಿದ್ಯಾರ್ಥಿಗಳು ಅವರ ಫಲಿತಾಂಶ ಮತ್ತು ಮನೆಯ ಆರ್ಥಿಕ ಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತೆ. ನೀವು ಮುಂದುವರೆಸಲು ಬಯಸುವ ಶಿಕ್ಷಣವನ್ನು ನಿಮ್ಮ ಕುಟುಂಬ ಭರಿಸಬಹುದೇ ಅಥವಾ ಇಲ್ಲವೇ? ಇದನ್ನು ಗಮನಸಿಬೇಕಾಗುತ್ತದೆ. ಹಣಕಾಸು ವಿಚಾರ ಮತ್ತು ವೆಚ್ಚಗಳನ್ನು ಮುಖ್ಯವಾಗಿ ಮನಸ್ಸಿಲ್ಲಿಟ್ಟುಕೊಳ್ಳಬೇಕಾಗುತ್ತದೆ.
What After 10th: SSLC ನಂತರ ಮುಂದೇನು?: ಕೋರ್ಸ್ ಆಯ್ಕೆ ಮಾಡಿಕೊಳ್ಳುವಾಗ ಈ ತಪ್ಪು ಮಾಡಲೇಬೇಡಿ! ಶೈಕ್ಷಣಿಕ ಬೆಳವಣಿಗೆ ಕಷ್ಟ!
Source link