UPSC Success Story: ಕುರಿಗಾಯಿ, ಅಡುಗೆಯವರ ಮಗಳು, ಪಂಕ್ಚರ್ ಅಂಗಡಿಯವರ ಮಗ: ಯುಪಿಎಸ್‌ಸಿ 2024ರ ಟಾಪರ್‌ಗಳ ಹಿಂದಿದೆ ಒಂದೊಂದು ಕಥೆ / UPSC 2024 Success Stories: From Cowherd to Cook’s Daughter—Meet the Toppers Who Beat All Odds

[ad_1]

ಯುಪಿಎಸ್​​ಸಿ ಫಲಿತಾಂಶದ ಅವರ ಸಾಧನೆ ಹಿಂದೆ ಅವರ ನಿದ್ರೆ ಇಲ್ಲದ ರಾತ್ರಿಗಳು, ಹಿನ್ನಡೆ, ಬಿಡುವಿಲ್ಲದ ಓದು, ಪರಿಶ್ರಮ, ತ್ಯಾಗ, ಅವರ ಹೆತ್ತವರ, ಮನೆಯವರ ಬೆಂಬಲ ಎಲ್ಲವೂ ಕಣ್ಣಿಗೆ ಕಟ್ಟುತ್ತದೆ. ಪ್ರತಿ ಅಭ್ಯರ್ಥಿಯ ಹಿಂದೆಯು ಒಂದೊಂದು ಕಥೆ ಇರುತ್ತದೆ. ಯುಪಿಎಸ್‌ಸಿ 2024ರ ಪರೀಕ್ಷೆಯಲ್ಲಿ ಪಾಸಾದ ಅಂತಹ ಕೆಲ ವಿಶಿಷ್ಟ ಅಭ್ಯರ್ಥಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಶಕ್ತಿ ದುಬೆ, AIR 1: ಪೊಲೀಸ್ ಅಧಿಕಾರಿಯ ಮಗಳು

ಯುಪಿಎಸ್‌ಸಿ 2024ರ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿರುವ ಶಕ್ತಿ ದುಬೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನವರು. ತಂದೆ ಓರ್ವ ಪೊಲೀಸ್‌ ಅಧಿಕಾರಿ. ಮಗಳ ಸಾಧನೆಗೆ ಇಡೀ ಕುಟುಂಬ ಸಂತೋಷ ವ್ಯಕ್ತಪಡಿಸಿದೆ. ಅವರ ತಂದೆಗಂತೂ ಮಗಳ ಸಾಧನೆ ಎಲ್ಲಿಲ್ಲದ ಹೆಮ್ಮೆ ತಂದು ಕೊಟ್ಟಿದೆ.

ಹರ್ಷಿತಾ ಗೋಯಲ್, AIR 2: ತಂದೆಯ ಮಾರ್ಗದರ್ಶನವೇ ಬೆಳಕು

ಕ್ಯಾನ್ಸರ್‌ನಿಂದ ತಾಯಿಯನ್ನು ಕಳೆದುಕೊಂಡ ನಂತರ, ಹರ್ಷಿತಾ ಗೋಯಲ್ ಅವರಿಗೆ ತಂದೆಯೇ ಎಲ್ಲಾ. ಚಾರ್ಟರ್ಡ್ ಅಕೌಂಟೆಂಟ್ ಮತ್ತು MSU ಬರೋಡಾದ ಪದವೀಧರೆಯಾದ ಹರ್ಷಿತಾ ತಮ್ಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪಾಸ್ ಮಾಡಿದರು. ತಂದೆಯೇ ಐಎಎಸ್‌ ಆಗುವ ಕನಸನ್ನು ನನ್ನಲ್ಲಿ ಬಿತ್ತಿದರು. ಈಗ ಅವರ ಕನಸು ನನಸಾಗಿದೆ. ನನಗೂ ಖುಷಿ ಇದೆ ಎಂದು ಹರ್ಷಿತಾ ಹೇಳಿದರೆ, ಮಗಳ ಸಾಧನೆಗೆ ಅಪ್ಪ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಇಕ್ಬಾಲ್ ಅಹ್ಮದ್, AIR 998: ಪಂಕ್ಚರ್ ರಿಪೇರಿ ಮಾಡುವವರ ಮಗ

ಉತ್ತರ ಪ್ರದೇಶದ ನಂದೌರ್‌ ಇಕ್ಬಾಲ್ ಅಹ್ಮದ್ ತಂದೆಗೆ ಗೌರವ ತಂದುಕೊಟ್ಟಿದ್ದಾರೆ. ಸೈಕಲ್ ಪಂಕ್ಚರ್ ಅಂಗಡಿ ನಡೆಸುತ್ತಿದ್ದ ಅವರ ತಂದೆ ಮಕ್ಬೂಲ್ ಅಹ್ಮದ್ ಆರೋಗ್ಯ ಸಮಸ್ಯೆಗಳಿಂದಾಗಿ ಅದನ್ನು ಮುಚ್ಚಬೇಕಾಯಿತು. ಸೀಮಿತ ಆದಾಯದ ಹೊರತಾಗಿಯೂ, ಇಕ್ಬಾಲ್ ಮೆಹ್ದವಾಲ್ ಇಂತಹ ಒಂದು ದೊಡ್ಡ ಸಾಧನೆ ಮಾಡಿದ್ದಾರೆ.

ಮಾಳವಿಕಾ ಜಿ ನಾಯರ್, AIR 45: ಹೆರಿಗೆ ಆಗಿ ಕೆಲವೇ ದಿನಗಳಲ್ಲಿ ಪರೀಕ್ಷೆ

ಕೇರಳದ ಮಾಳವಿಕಾ ಜಿ. ನಾಯರ್ ಹೆರಿಗೆಯಾದ ಕೇವಲ 17 ದಿನಗಳ ನಂತರ ಯುಪಿಎಸ್‌ಸಿ ಪರೀಕ್ಷೆ ಬರೆದು ಸುದ್ದಿಯಾಗಿದ್ದರು. ಸೆಪ್ಟೆಂಬರ್ 3 ರಂದು ಮಗುವಿಗೆ ಜನ್ಮವಿತ್ತು, ಸೆಪ್ಟೆಂಬರ್ 20 ರಂದು ಪರೀಕ್ಷೆ ಬರೆದು ಇವರು ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಪತಿ, ಪೋಷಕರು, ಸಹೋದರಿಯ ಬೆಂಬಲ ನನ್ನ ಸಾಧನೆಗೆ ಕಾರಣ ಎನ್ನುತ್ತಾರೆ ಇವರು.

ಮನು ಗಾರ್ಗ್, AIR 91: ದೃಷ್ಟಿಹೀನ ಮಗನಿಗಾಗಿ ಕಷ್ಟಪಟ್ಟ ತಾಯಿ

ಜೈಪುರದ ಮನು ಗಾರ್ಗ್ 9ನೇ ತರಗತಿಯಲ್ಲಿ ದೃಷ್ಟಿ ಕಳೆದುಕೊಂಡರು. ಪತಿಯ ಅಗಲಿಕೆ, ದೃಷ್ಟಿಹೀನ ಈ ಎಲ್ಲಾ ಪರಿಸ್ಥಿತಿಗಳ ನಡುವೆ ಇವರ ತಾಯಿ ಮನು ಅವರಿಗೆ ಶಿಕ್ಷಣ ನೀಡಿ ಓದಲು ಹುರಿದುಂಬಿಸಿದರು. ಮನು ಜೆಎನ್‌ಯುನಲ್ಲಿ ಸ್ನಾತಕೋತ್ತರ ಪದವಿ ಪಡೆದರು ಮತ್ತು ಬ್ರೈಲ್ ಲಿಪಿಯನ್ನು ಕಲಿಯದೆ, ತಂತ್ರಜ್ಞಾನದ ಮೂಲಕ ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಪ್ರೀತಿ ಎಸಿ, AIR 263: ಅಡುಗೆಯವರ ಮಗಳ ಸಾಧನೆ

ಯುಪಿಎಸ್ಸಿ 2024ರಲ್ಲಿ 263ನೇ ರ‍್ಯಾಂಕ್ ಗಳಿಸಿರುವ ಪ್ರೀತಿ ನಮ್ಮ ರಾಜ್ಯದವರೇ ನೋಡಿ. ಶಾಲೆ ಮೆಟ್ಟಿಲೇರದ, ಅರೆಕಾಲಿಕ ಅಡುಗೆಯವರ ಮಗಳಾದ ಪ್ರೀತಿಗೆ ಅಪ್ಪ-ಅಮ್ಮ ಶಿಕ್ಷಣಕ್ಕೆ ಬೆಂಬಲ ನೀಡಿದ್ದರು. ಮಂಡ್ಯದಲ್ಲಿ ಕೃಷಿಯಲ್ಲಿ ಬಿಎಸ್ಸಿ ಮತ್ತು ಬಿಎಚ್‌ಯುನಲ್ಲಿ ಎಂಎಸ್ಸಿ ಪಡೆದ ಈಕೆ ಯುಪಿಎಸ್‌ಸಿ ಪರೀಕ್ಷೆಯನ್ನು ಗೆದ್ದಿದ್ದಾರೆ.

ಬೀರಪ್ಪ ಡೋಣಿ, AIR 551: ಕುರಿಗಾಯಿ

ಕರ್ನಾಟಕದ ನಾನಾವಾಡಿ ಗ್ರಾಮದಲ್ಲಿ ಕುರಿ ಮೇಯಿಸುತ್ತಿದ್ದ ಬೀರಪ್ಪ ಸಿದ್ದಪ್ಪ ಡೋಣಿ AIR 551ನೊಂದಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಮಹಾರಾಷ್ಟ್ರದ ಅಮಗೆ ಗ್ರಾಮದ ಬಿಟೆಕ್ ಪದವೀಧರ ಮತ್ತು ಕುರುಬ ಸಮುದಾಯದ ಸದಸ್ಯರಾದ ಅವರು ಇಂಡಿಯಾ ಪೋಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಸೈನೈಕ್ಕೆ ಸೇರುವ ಬಯಕೆ ಹೊಂದಿದ್ದ ಬೀರಪ್ಪ ಡೋಣಿ ಯುಪಿಎಸ್‌ಸಿ ಪರೀಕ್ಷೆ ಪಾಸ್‌ ಮಾಡಿದ್ದಾರೆ. ಇದು ಕೂಡ ದೇಶಕ್ಕೆ ಸೇವೆ ಸಲ್ಲಿಸುವ ಕೆಲಸವೇ ಎಂದು ಬೀರಪ್ಪ ಸಂತಸ ಹಂಚಿಕೊಂಡಿದ್ದಾರೆ.

[ad_2]
Source link

Leave a Comment