UPSC Result 2024: ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ, ಶಕ್ತಿ ದುಬೆ ಟಾಪರ್ UPSC 2024 Final Results out 1009 Candidates Selected Shakti Dubey tops

[ad_1]

Last Updated:

ಈ ಬಾರಿ ಶಕ್ತಿ ದುಬೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಯುಪಿಎಸ್‌ಸಿ ಒಟ್ಟು 1009 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸಾಮಾನ್ಯ ವರ್ಗದಿಂದ 335 ಅಭ್ಯರ್ಥಿಗಳಿದ್ದಾರೆ.

UPSCUPSC
UPSC
ನವದೆಹಲಿ(ಏ.22): UPSC ನಾಗರಿಕ ಸೇವೆಗಳ ಪರೀಕ್ಷೆಯ 2024ನೇ ಸಾಲಿನ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಇದನ್ನು upsc.gov.in ಗೆ ಭೇಟಿ ನೀಡುವ ಮೂಲಕ ಪರಿಶೀಲಿಸಬಹುದು. ಈ ಬಾರಿ ಶಕ್ತಿ ದುಬೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಯುಪಿಎಸ್‌ಸಿ ಒಟ್ಟು 1009 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸಾಮಾನ್ಯ ವರ್ಗದಿಂದ 335 ಅಭ್ಯರ್ಥಿಗಳಿದ್ದಾರೆ. ಆರ್ಥಿಕವಾಗಿ ದುರ್ಬಲ ವರ್ಗದಿಂದ (EWS) 109 ಅಭ್ಯರ್ಥಿಗಳು ಮತ್ತು OBC ವರ್ಗದಿಂದ 318 ಅಭ್ಯರ್ಥಿಗಳು ಇದ್ದಾರೆ.

UPSC ನಾಗರಿಕ ಸೇವೆಗಳ ಪರೀಕ್ಷೆ 2024 ರ ಸಂದರ್ಶನಗಳು ಏಪ್ರಿಲ್ 17 ರವರೆಗೆ ನಡೆದವು. ಜನವರಿ 7 ರಿಂದ ಸಂದರ್ಶನ ಸುತ್ತು ಪ್ರಾರಂಭವಾಯಿತು. ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ 2845 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗಿತ್ತು.

2024 ರ ನಾಗರಿಕ ಸೇವಾ ಪರೀಕ್ಷೆಯ ಅಡಿಯಲ್ಲಿ, ಕೇಂದ್ರ ಲೋಕಸೇವಾ ಆಯೋಗವು ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ಸೇವೆಗಳಲ್ಲಿ 1132 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ಹಿಂದೆ ಮೂಲ ಅಧಿಸೂಚನೆಯಲ್ಲಿ 1056 ಹುದ್ದೆಗಳು ಖಾಲಿ ಇದ್ದವು. ಆದರೆ ನಂತರ ಖಾಲಿ ಹುದ್ದೆಯನ್ನು ಹೆಚ್ಚಿಸಲಾಯಿತು.

UPSC 2024ರ ಟಾಪ್ 10 ಅಭ್ಯರ್ಥಿಗಳ ಪಟ್ಟಿ

*ಶಕ್ತಿ ದುಬೆ

*ಹರ್ಷಿತಾ ಗೋಯೆಲ್

*ಡೋಂಗ್ರೆ ಅರ್ಚಿತ್ ಪರಾಗ್

*ಶಾ ಮಾರ್ಗಿ ಚಿರಾಗ್

*ಆಕಾಶ್ ಗರ್ಗ್

*ಕೋಮಲ್ ಪುನಿಯಾ

*ಆಯುಷಿ ಬನ್ಸಾಲ್

*ರಾಜ್‌ಕೃಷ್ಣ ಝಾ

*ಆದಿತ್ಯ ವಿಕ್ರಮ್ ಅಗರ್ವಾಲ್

*ಮಾಯಾಂಕ್ ತ್ರಿಪಾಠಿ

[ad_2]
Source link

Leave a Comment