[ad_1]
Last Updated:
ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅಂಚೆ ಇಲಾಖೆಗೆ ಹೊಸ ಕಾಯಕಲ್ಪ ನೀಡಲು ಮುಂದಾಗಿರುವ ವಿತ್ತ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಅಂಚೆ ಇಲಾಖೆಯೊಂದಿಗೆ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತನೆಯಾಗುತ್ತಿದೆ. ಹೌದು ವಿತ್ತ ಸಚಿವೆ ನಿರ್ಮಲ ಅವರು ಇಂದು ಘೋಷಣೆ ಮಾಡಿದಂತೆ 150 ವರ್ಷಗಳಿಗಿಂತಲೂ ಹಳೆಯ ಸಂಸ್ಥೆಗೆ ಚೈತನ್ಯ ತುಂಬುವ ಕೆಲಸ ಮಾಡಿದ್ದಾರೆ.
ನವದೆಹಲಿ: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅಂಚೆ ಇಲಾಖೆಗೆ ಹೊಸ ಕಾಯಕಲ್ಪ ನೀಡಲು ಮುಂದಾಗಿರುವ ವಿತ್ತ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಅಂಚೆ ಇಲಾಖೆಯೊಂದಿಗೆ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತನೆಯಾಗುತ್ತಿದೆ. ಹೌದು ವಿತ್ತ ಸಚಿವೆ ನಿರ್ಮಲ ಅವರು ಇಂದು ಘೋಷಣೆ ಮಾಡಿದಂತೆ 150 ವರ್ಷಗಳಿಗಿಂತಲೂ ಹಳೆಯ ಸಂಸ್ಥೆಗೆ ಚೈತನ್ಯ ತುಂಬುವ ಕೆಲಸ ಮಾಡಿದ್ದಾರೆ.
ಅಂಚೆ ಇಲಾಖೆಯನ್ನು ಬೃಹತ್ ಲಾಜಿಸ್ಟಿಕ್ಸ್ ಸಂಸ್ಥೆಯಾಗಿಸುವ ಸೂಚನೆ
ವಿಶ್ವದ ಅತಿದೊಡ್ಡ ಅಂಚೆ ಜಾಲವಾಗಿರುವ ಭಾರತೀಯ ಅಂಚೆ ಇಲಾಖೆಯ 1.5 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳೊಂದಿಗೆ “ದೊಡ್ಡ ಲಾಜಿಸ್ಟಿಕ್ಸ್ ಸಂಸ್ಥೆ” ಆಗಿ ಪರಿವರ್ತಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ. ಇದರೊಂದಿಗೆ ತನ್ನ ಬಜೆಟ್ ಭಾಷಣದಲ್ಲಿ ಅಂಚೆ ಇಲಾಖೆ ಕುರಿತಾದ ಮಹತ್ವಾಕಾಂಕ್ಷೆಯ ದೃಷ್ಟಿಕೋನವನ್ನು ವಿವರಿಸಿದ್ದಾರೆ. ಈಗಾಗಲೇ ಮೊಬೈಲ್, ಎಸ್‌ಎಂಎಸ್, ಇಂಟರ್‌ನೆಟ್, ಸೋಷಿಯಲ್ ಮೀಡಿಯಾ ಯುಗದಲ್ಲಿ ಪತ್ರ ಬರೆಯುವವರು ಕಡಿಮೆಯಾಗುತ್ತಿದ್ದಾರೆ. ಇದರಿಂದ ಅಂಚೆ ಇಲಾಖೆಯ ಕೆಲಸಗಳು ಕಡಿಮೆಯಾಗುತ್ತಿವೆ. ಆದರೆ ಇದೇ ಸಮಯದಲ್ಲಿ ಅಂಚೆ ಇಲಾಖೆಯನ್ನು ಬೃಹತ್ ಲಾಜಿಸ್ಟಿಕ್ಸ್ ಸಂಸ್ಥೆಯಾಗಿಸುವ ಸೂಚನೆಯನ್ನು ಬಜೆಟ್‌ನಲ್ಲಿ ನೀಡಿರುವುದು ಆಶಾದಾಯಕವಾಗಿದೆ.

ಭಾರತೀಯ ಅಂಚೆ ಇಲಾಖೆ
ಜನರಿಗೆ ಮತ್ತಷ್ಟು ಹತ್ತಿರವಾಗುವ ಕೆಲಸ ಮಾಡಲು ಮುಂದಾದ ಇಂಡಿಯಾ ಪೋಸ್ಟ್
ಈಗಾಗಲೇ ಇ-ಅಂಚೆ, ಮನಿ ಆರ್ಡ್‌ರ್, ಐಪಿಪಿಬಿ ವ್ಯವಸ್ಥೆ, ಹಣ ವರ್ಗಾವಣೆ, ಬ್ಯಾಂಕಿಂಗ್ ವ್ಯವಸ್ಥೆ, ಹೂಡಿಕೆ ಹಾಗೂ ವಿಶೇಷ ಕೋರಿಯರ್ ಸೇವೆ ಸೇರಿದಂತೆ ಹಲವು ಸಾರ್ವಜನಿಕ ವಲಯಕ್ಕೆ ಹತ್ತಿರವಾಗುವಂತೆ ಮನೆ ಬಾಗಿಲಿಗೆ ಸೇವೆ ನೀಡುತ್ತಿರುವ ಅಂಚೆ ಇಲಾಖೆಯು ಇದೀಗ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತನೆಯಾಗುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗುವ ಕೆಲಸ ಮಾಡಲು ಮುಂದಾಗಿದ್ದಾರೆ.
ಅಂಚೆ ಇಲಾಖೆಯನ್ನು ಮರು ಸ್ಥಾಪಿಸುವುದು ಮಾತ್ರವಲ್ಲದೆ ಸಹಕಾರಿ ವಲಯವನ್ನು ಬಲಪಡಿಸುವ ಕ್ರಮಗಳನ್ನೂ ಘೋಷಿಸಿದ್ದಾರೆ. ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್‌ಸಿಡಿಸಿ)ಕ್ಕೆ ಉತ್ತೇಜನ ನೀಡುವಂತಹ ಕ್ರಮಗಳನ್ನು ಘೋಷಿಸಿದ್ದಾರೆ. ಎನ್‌ಸಿಡಿಸಿ ಸಾಲ ನೀಡುವ ಕಾರ್ಯಾಚರಣೆಯನ್ನು ಹೆಚ್ಚಿಸಲು ಸರಕಾರ ಬೆಂಬಲ ನೀಡಲಿದೆ ಎಂದು ಅವರು ಹೇಳಿದ್ದಾರೆ. ಈ ಕ್ರಮವು ಸಹಕಾರಿ ಪರಿಸರ ವ್ಯವಸ್ಥೆಯೊಳಗೆ ಹಣಕಾಸಿನ ನೆರವು ಹೆಚ್ಚಿಸುವ ನಿರೀಕ್ಷೆಯಿದೆ.
ಗ್ರಾಹಕ ಸ್ನೇಹಿ ಅಂಚೆ ಇಲಾಖೆ
ಅಂಚೆ ಇಲಾಖೆ ಮೊದಲಿನಿಂದಲೂ ಗ್ರಾಹಕ ಸ್ನೇಹಿಯಾಗಿದೆ. ಇತ್ತೀಚೆಗಂತೂ ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ವಿಶೇಷಚೇತನ ಗ್ರಾಹಕರಿಗೆ ಮತ್ತಷ್ಟು ಸವಲತ್ತುಗಳನ್ನು ಒದಗಿಸಿದೆ. ಅಂಚೆ ಕಚೇರಿಗಳಲ್ಲಿ ನೀರು, ವಿದ್ಯುತ್ , ಮೊಬೈಲ್ ರೀಚಾರ್ಜ್ ಸೇರಿದಂತೆ ಎಲ್ಲ ರೀತಿಯ ಬಿಲ್‌ಗಳನ್ನು ಕಟ್ಟಬಹುದು. ಒಟ್ಟಿನಲ್ಲಿ ಅಂಚೆ ಕಚೇರಿಯಲ್ಲಿ ಜನರಿಗೆ ಎಲ್ಲ ಸೌಲಭ್ಯಗಳು ದೊರೆಯುತ್ತಿವೆ.
ಅಂಚೆ ಇಲಾಖೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೋರ್ ಬ್ಯಾಂಕಿಂಗ್ ಮತ್ತು ಆನ್‌ಲೈನ್ ಸೇವೆಗಳನ್ನು ಅಳವಡಿಸಿಕೊಂಡಿದೆ. ಎಟಿಎಂಗಳು ಇಲ್ಲದಂತಹ ಗ್ರಾಮೀಣ ಪ್ರದೇಶಗಳ ಜನರಿಗೆ ಅನುಕೂಲವಾಗಲು ಆಧಾರ್ ಎನೇಬಲ್. ಪೇಮೆಂಟ್ ಸಿಸ್ಟಮ್‌ಅನ್ನೂ ಅಳವಡಿಸಿಕೊಂಡಿದ್ದು, ಗ್ರಾಹಕರು ತಮ್ಮ ಆಧಾರ್ ನಂಬರ್ ನೀಡುವ ಮೂಲಕ ತಾವಿರುವಲ್ಲಿಯೇ ಹಣ ಪಡೆಯಬಹುದಾದಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.
New Delhi,Delhi
February 01, 2025 6:21 PM IST
Source link