[ad_1]
ಪ್ರೌಢ ಸಸ್ಯಗಳಿಗಿಂತ 40 ಪಟ್ಟು ಹೆಚ್ಚು ಪೋಷಕಾಂಶಗಳು ಇದರಲ್ಲಿವೆ
ಈ ವೇಗವಾಗಿ ಬೆಳೆಯುವ ಮೊಳಕೆಗಳು, ಪ್ರೌಢ ಸಸ್ಯಗಳಿಗಿಂತ 40 ಪಟ್ಟು ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತವೆ ಎಂಬುದನ್ನು ಕಂಡುಕೊಂಡ ಅವರು ತಡಮಾಡಲಿಲ್ಲ. ತಮ್ಮ ಮನೆಯ 80 ಚದರ ಅಡಿ ವಿಸ್ತೀರ್ಣದ ಕೋಣೆಯಲ್ಲಿ ಸಾವಯವ ಮೈಕ್ರೋಗ್ರೀನ್‌ಗಳನ್ನು ಬೆಳೆಸುವ ಮೂಲಕ ತಿಂಗಳಿಗೆ 5 ಲಕ್ಷ ಸಂಪಾದಿಸುತ್ತಿದ್ದಾರೆ.
ಎರಡು ರ‍್ಯಾಕ್‌ಗಳ ಮೂಲಕ ಕೃಷಿ ಆರಂಭ
ಎರಡು ವರ್ಷಗಳ ಸುದೀರ್ಘ ಸಂಶೋಧನೆಯ ನಂತರ ಅಜಯ್, ‘ಗೋ ಗ್ರೀನ್ಸ್’ ಉದ್ಯಮವನ್ನು ಆರಂಭಿಸಿದರು. ಮೊದಲಿಗೆ ಎರಡು ರ‍್ಯಾಕ್‌ಗಳಿಂದ ಮೈಕ್ರೋಗ್ರೀನ್ಸ್ ಕೃಷಿ ಆರಂಭಿಸಿದ ಅಜಯ್, ಆರಂಭದಲ್ಲಿ 25°C ಗಿಂತ ಕಡಿಮೆ ತಾಪಮಾನ ಮತ್ತು 40% ಮತ್ತು 60% ರ ನಡುವೆ ಆರ್ದ್ರತೆಯ ಮಟ್ಟವನ್ನು ಹೊಂದಿರುವ ನಿಯಂತ್ರಿತ ಪರಿಸರವನ್ನು ನಿರ್ಮಿಸಿದರು. ಏಳು ದಿನಕ್ಕೆ ಕೊಯ್ಲು ಸಿದ್ಧಗೊಂಡಿತು. ಮೈಕ್ರೋಗ್ರೀನ್ ಕೃಷಿಯಲ್ಲಿ ಮುಖ್ಯವಾಗಿ ಟ್ರೇ, ಬೀಜಗಳು ಹಾಗೂ ಕೊಕೊಪಿಟ್ ಮುಖ್ಯವಾಗಿರುತ್ತವೆ. ಹಾಗೂ ಉತ್ತಮ ಫಲಿತಾಂಶಗಳನ್ನು ಸಾಧಿಸಲು ಕ್ರಮಬದ್ಧ ವಿಧಾನವನ್ನು ಅನುಸರಿಸುವುದು ಮುಖ್ಯವಾಗಿದೆ.
ಪ್ರಾಯೋಗಿಕವಾಗಿ ಆರಂಭಿಸಿದರು
ಈ ಕೃಷಿಯ ಬಗ್ಗೆ ಹೇಳಿರುವ ಗೋಪಿನಾಥ್, ”2017 – 2018 ರಲ್ಲಿ ಇದನ್ನು ಪ್ರಾಯೋಗಿಕ ರೀತಿಯಲ್ಲಿ ಬೆಳೆಯಲು ಆರಂಭಿಸಿದರು. ಸರಿಯಾದ ವಿಧಾನಗಳ ಬಗ್ಗೆ ನನಗೆ ಖಚಿತವಿಲ್ಲದಿದ್ದರೂ, ಎರಡು ವರ್ಷಗಳ ಸಂಶೋಧನೆ ಮತ್ತು ಪ್ರಯೋಗದ ನಂತರ ಇದರಲ್ಲಿ ಯಶಸ್ವಿಯಾದೆ” ಎಂದು ತಿಳಿಸಿದ್ದಾರೆ. ಇಂದು ಅಜಯ್ 15 ಕ್ಕೂ ಹೆಚ್ಚು ವಿಧದ ಮೈಕ್ರೋಗ್ರೀನ್‌ಗಳನ್ನು ಬೆಳೆಸುತ್ತಾರೆ ಹಾಗೂ ಅವರ ಯಶಸ್ವಿ ವ್ಯವಹಾರದಿಂದ ಮಾಸಿಕ ಐದು ಲಕ್ಷಗಳವರೆಗೆ ಮಾರಾಟವಾಗುತ್ತದೆ ಎಂದಿದ್ದಾರೆ.

ಅಜಯ್ ಗೋಪಿನಾಥ್
ಅನೇಕ ಪ್ರಯೋಗಗಳನ್ನು ನಡೆಸಿದರು
ಅಜಯ್ ಅವರ ಯಶಸ್ಸಿನ ಹಾದಿಯು ಅನೇಕ ಪ್ರಯೋಗಗಳನ್ನೊಳಗೊಂಡಿತ್ತು. ಹಸಿರು ಕಾಳುಗಳನ್ನು ಬೆಳೆಯಲು ಟಿಶ್ಯೂ ಪೇಪರ್‌ಗಳನ್ನು ಬಳಸುವ ಮೈಕ್ರೋಗ್ರೀನ್‌ಗಳನ್ನು ಬೆಳೆಸುವುದು ಅವರ ಆರಂಭಿಕ ಪ್ರಯತ್ನವಾಗಿತ್ತು. ಆನ್‌ಲೈನ್ ಟ್ಯುಟೋರಿಯಲ್‌ಗಳನ್ನು ವೀಕ್ಷಿಸಿದರು. ನಂತರ ಯುಕೆಯಲ್ಲಿರುವ ಮೈಕ್ರೋಗ್ರೀನ್ಸ್ ತಜ್ಞರಿಂದ ಮಾರ್ಗದರ್ಶನ ಪಡೆದರು.
ನಗರಗಳಿಂದ ಬೀಜಗಳನ್ನು ಪಡೆದ ಅಜಯ್
ಬೆಂಗಳೂರು, ಪುಣೆ ಮತ್ತು ಛತ್ತೀಸ್‌ಗಢದಿಂದ ಉತ್ತಮ ಗುಣಮಟ್ಟದ ಬೀಜಗಳನ್ನು ಪಡೆದ ನಂತರ, ನಿಯಂತ್ರಿತ ಒಳಾಂಗಣ ಪರಿಸ್ಥಿತಿಗಳಲ್ಲಿ ಮೈಕ್ರೋಗ್ರೀನ್‌ಗಳನ್ನು ಬೆಳೆಸುವ ತಮ್ಮ ತಂತ್ರವನ್ನು ಅವರು ಪರಿಪೂರ್ಣಗೊಳಿಸಿದರು. ಎರಡು ಟ್ರೇಗಳೊಂದಿಗೆ ಮೈಕ್ರೋಗ್ರೀನ್ಸ್ ಆರಂಭಿಸಿದ ಅವರು, ತಮ್ಮ ಸ್ನೇಹಿತರೊಂದಿಗೆ ಬೆಳೆಗಳ ಫಲಿತಾಂಶ ತಿಳಿಸಲು ಕೇಳಿಕೊಂಡರು. ಸ್ನೇಹಿತರು ಸಕಾರಾತ್ಮಕ ಅನಿಸಿಕೆಗಳನ್ನು ನೀಡಿದ್ದಾರೆ ಹಾಗೂ ಬೆಳೆಗಳ ರುಚಿ ಹಾಗೂ ಗುಣಮಟ್ಟ ಅವರಿಗೆ ಇಷ್ಟವಾಗಿತ್ತು ಎಂದು ತಿಳಿಸಿದ್ದಾರೆ. ಈ ಅನಿಸಿಕೆಗಳು ಅವರಿಗೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು ನೆರವನ್ನು ನೀಡಿತು.
ವಿವಿಧ ಉತ್ಪನ್ನಗಳ ಮೈಕ್ರೋಗ್ರೀನ್ ಕೃಷಿ
ಅಜಯ್ ಈಗ ಮೂಲಂಗಿ, ಸಾಸಿವೆ, ಸೂರ್ಯಕಾಂತಿ ಹಾಗೂ ಬೀಟ್‌ರೂಟ್‌ಗಳ ಮೈಕ್ರೋಗ್ರೀನ್‌ಗಳನ್ನು ಬೆಳೆಯುತ್ತಾರೆ. ತಮ್ಮ ಸ್ವಂತ ವ್ಯವಹಾರದ ಹೊರತಾಗಿ, ಅಜಯ್ ಭಾರತದಾದ್ಯಂತ 30 ಕ್ಕೂ ಹೆಚ್ಚು ರೈತರು ತಮ್ಮದೇ ಆದ ಮೈಕ್ರೋಗ್ರೀನ್ ಫಾರ್ಮ್‌ಗಳನ್ನು ಸ್ಥಾಪಿಸಲು ಸಹಾಯ ಮಾಡಿದ್ದಾರೆ. ಈ ಮೂಲಕ ತಾವು ಬೆಳೆಯುವುದರ ಜೊತೆಗೆ ಇತರರನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು ನೆರವಾಗಿದ್ದಾರೆ.
February 14, 2025 10:59 PM IST
Source link