Success Story: ನೋಟ್ಸ್ ಮಾಡಿಕೊಳ್ಳದೆ ಓದಿ ನೀಟ್ ಪರೀಕ್ಷೆ ಪಾಸ್ ಮಾಡಿದ ಆಟೋ ಚಾಲಕನ ಮಗ! ಹಾಗಾದ್ರೆ ಕಲಿಕೆ ಹೇಗಿತ್ತು? / NEET Success Story: Auto Driver’s Son Cracks Exam Without Notes – Here’s How He Did It!

[ad_1]

ಶಶಾಂಕ್ ತಮ್ಮ ಮೂರನೇ ಪ್ರಯತ್ನದಲ್ಲಿ 720 ಅಂಕಗಳ ಪೈಕಿ 673 ಅಂಕಗಳನ್ನು ಗಳಿಸುವ ಮೂಲಕ, ವೈದ್ಯಕೀಯ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ.

ನೀಟ್ ಯುಜಿ ಯಶಸ್ಸಿನ ಹಾದಿಯು ಶಶಾಂಕ್ ಅವರ ಅಚಲ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಆರ್ಥಿಕ ಮತ್ತು ಕೌಟುಂಬಿಕ ಸವಾಲುಗಳನ್ನು ಎದುರಿಸುತ್ತಿದ್ದರೂ, ಅವರು ವೈದ್ಯಕೀಯ ಪದವಿ ಪಡೆಯುವ ಗುರಿಯತ್ತ ಗಮನ ಹರಿಸಿದ್ದರು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಬಯಕೆಯಿಂದ ಅವರ ಪ್ರೇರಣೆ ಹುಟ್ಟಿಕೊಂಡಿದೆ ಮತ್ತು ವೈದ್ಯಕೀಯ ಪದವಿಯು ಅರ್ಥಪೂರ್ಣ ಕೊಡುಗೆಯನ್ನು ನೀಡಲು ಅನುವು ಮಾಡಿಕೊಡುತ್ತದೆ ಎಂದು ಅವರು ನಂಬುತ್ತಾರೆ.

ತಮ್ಮ ಯಶಸ್ಸಿಗೆ ಕಾರಣ ಅವರ ಶಿಸ್ತುಬದ್ದ ಅಧ್ಯಯನ ದಿನಚರಿ ಅಂತಾರೆ ಶಶಾಂಕ್

ಶಶಾಂಕ್ ಅವರ ಯಶಸ್ಸಿಗೆ ಅವರ ಶಿಸ್ತುಬದ್ಧ ಅಧ್ಯಯನ ದಿನಚರಿಯೇ ಕಾರಣ ಎಂದು ಹೇಳಬಹುದು. ಅವರು ಬೆಳಗ್ಗೆ 6 ಗಂಟೆಗೆ ದೈಹಿಕ ವ್ಯಾಯಾಮ, ನಂತರ ತರಬೇತಿ ತರಗತಿಗಳೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಿದ್ದರು.

ಮಧ್ಯಾಹ್ನ ಊಟ ಮತ್ತು ಸಣ್ಣ ವಿರಾಮದ ನಂತರ, ಅವರು ಮೂರು ಪಾಳಿಗಳಲ್ಲಿ ಅಧ್ಯಯನ ಮಾಡುತ್ತಿದ್ದರು, ಹೀಗೆ ಅವರು ತಮ್ಮ ಸಮಯವನ್ನು ಎಲ್ಲಿಯೂ ವ್ಯರ್ಥ ಮಾಡದೆ ಸದುಪಯೋಗಪಡಿಸಿಕೊಳ್ಳುತ್ತಿದ್ದರು. ಅಧ್ಯಯನ ಸಂಪನ್ಮೂಲಗಳನ್ನು ಪಡೆಯುವಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದರೂ, ಶಶಾಂಕ್ ಅವರ ಕುಟುಂಬವು ಅವರಿಗೆ ಅಚಲ ಬೆಂಬಲವನ್ನು ನೀಡಿತು, ಅವರು ತಮ್ಮ ಪರೀಕ್ಷೆಯ ತಯಾರಿಯಲ್ಲಿ ಪೂರ್ಣ ಗಮನ ಹರಿಸಲು ಮತ್ತು ಪ್ರೇರೇಪಿತರಾಗಿರಲು ಪ್ರೋತ್ಸಾಹಿಸಿತು.

ನೀಟ್ ಯುಜಿ ತಯಾರಿಗೆ ಶಶಾಂಕ್ ಅವರ ವಿಧಾನವು ನೇರ ಮತ್ತು ಪರಿಣಾಮಕಾರಿಯಾಗಿತ್ತು. ಅವರು ಪಠ್ಯಪುಸ್ತಕಗಳಿಗೆ ಮೊದಲ ಆದ್ಯತೆ ನೀಡಿದರು ಮತ್ತು ಯಾವುದೇ ರೀತಿಯ ನೋಟ್ಸ್ ಮಾಡಿಕೊಳ್ಳಲು ಹೋಗಲಿಲ್ಲ, ಬದಲಿಗೆ ಅವರು ವಿಷಯಗಳ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವತ್ತ ಗಮನ ಹರಿಸಲು ಆಯ್ಕೆ ಮಾಡಿಕೊಂಡರು. ಈ ವಿಧಾನವು ಅವರಿಗೆ ಯಶಸ್ಸು ತಂದು ಕೊಟ್ಟಿತು ಅಂತ ಅವರ ಶಿಕ್ಷಕರು ಹೇಳಿದರು.

ಹೇಗಿತ್ತು ನೋಡಿ ಶಶಾಂಕ್ ಅವರ ಪರೀಕ್ಷೆ ತಯಾರಿ!

ಮೊದಲಿಗೆ ಸರಳವಾಗಿರುವ ಪ್ರಶ್ನೆಗಳೊಂದಿಗೆ ಪ್ರಾರಂಭಿಸಿ ಕ್ರಮೇಣ ಹೆಚ್ಚು ಸಂಕೀರ್ಣವಾದ ಪ್ರಶ್ನೆಗಳಿಗೆ ಹೋಗುವುದರಲ್ಲಿ ಶಶಾಂಕ್ ನಂಬಿಕೆ ಇಡುತ್ತಾರೆ, ಇದು ಅವರಿಗೆ ಆತ್ಮವಿಶ್ವಾಸ ಮತ್ತು ನಿಖರತೆಯನ್ನು ಬೆಳೆಸಲು ತುಂಬಾನೇ ಸಹಾಯ ಮಾಡಿತು.

‘ನಾನು ಅಲೆನ್ ಇನ್ಸ್ಟಿಟ್ಯೂಟ್ ಒದಗಿಸಿದ ಪಠ್ಯಪುಸ್ತಕಗಳನ್ನು ಅವಲಂಬಿಸಿದ್ದೆ ಮತ್ತು ಅವು ಸಾಕಷ್ಟು ಉಪಯುಕ್ತವೆಂದು ಕಂಡುಕೊಂಡೆ. ನನ್ನ ಕೆಲವು ಬ್ಯಾಚ್‌ಮೇಟ್‌ಗಳು ತರಗತಿಯಲ್ಲಿ ನೋಟ್ಸ್ ಮಾಡಿಕೊಳ್ಳುತ್ತಿದ್ದರು ಮತ್ತು ಅವುಗಳನ್ನು ತರಬೇತಿ ಸಾಮಗ್ರಿಗಳೊಂದಿಗೆ ಜೋಡಿಸಿಕೊಂಡು ತಯಾರಿ ನಡೆಸುತ್ತಿದ್ದರು. ಆದರೆ ನನಗೆ, ಆ ವಿಧಾನವು ಕೆಲಸ ಮಾಡಲಿಲ್ಲ.

ಆರಂಭದಲ್ಲಿ, ನನ್ನ ಜೊತೆ ಇರುವವರು ನೋಟ್ಸ್ ಮಾಡಿಕೊಳ್ಳುತ್ತಿರುವುದರಿಂದ, ನಾನು ಸಹ ಹಾಗೆಯೇ ಮಾಡಿದೆ. ಆದರೆ ಆ ವಿಧಾನ ನನ್ನ ಪರೀಕ್ಷಾ ತಯಾರಿಯ ಮೇಲೆ ಪರಿಣಾಮ ಬೀರಬಹುದು ಎಂದು ನಾನು ಭಾವಿಸಿದೆ. ಆದರೆ ನನ್ನ ಶಿಕ್ಷಕರೊಂದಿಗೆ ಚರ್ಚಿಸಿದ ನಂತರ, ನನ್ನ ಅಧ್ಯಯನದ ಮೇಲೆ ನಕಾರಾತ್ಮಕ ಪರಿಣಾಮ ಬೀರದ ಹೊರತು, ನೋಟ್ಸ್ ಮಾಡದಿರುವುದು ಸಂಪೂರ್ಣವಾಗಿ ಒಳ್ಳೆಯದು ಎಂದು ಅವರು ನನಗೆ ಭರವಸೆ ನೀಡಿದರು ಎಂದು ಶಶಾಂಕ್ ಹೇಳಿದರು.

ಮಹಾರಾಷ್ಟ್ರದ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದ ಶಶಾಂಕ್

ನೀಟ್ ಯುಜಿ ಫಲಿತಾಂಶಗಳೊಂದಿಗೆ, ಶಶಾಂಕ್ ಮಹಾರಾಷ್ಟ್ರದ ಗ್ರಾಂಟ್ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದಿದ್ದಾರೆ, ಅಲ್ಲಿ ಅವರು ತಮ್ಮ ಎಂಬಿಬಿಎಸ್ ಪದವಿಯನ್ನು ಪಡೆಯಲಿದ್ದಾರೆ. ಇವರು ನೀಡಿದ ಒಂದು ಸಂದರ್ಶನದಲ್ಲಿ ಅವರು ಈ ಕಾಲೇಜನ್ನು ಏಕೆ ಆಯ್ಕೆ ಮಾಡಿಕೊಂಡತು ಎಂಬುದರ ಬಗ್ಗೆ ಮಾತನಾಡಿದರು. ಮಹಾರಾಷ್ಟ್ರದ ಚಂದ್ರಾಪುರದಲ್ಲಿ ತಮ್ಮ ಬಾಲ್ಯವನ್ನು ಕಳೆದ ಕಾರಣ ಈ ಕಾಲೇಜನ್ನು ಆರಿಸಿಕೊಂಡಿದ್ದೇನೆ ಎಂದು ಶಶಾಂಕ್ ಹೇಳಿದರು.

ಪರಿಶ್ರಮ ಮತ್ತು ಸಮರ್ಪಣೆ ಅಡೆತಡೆಗಳನ್ನು ನಿವಾರಿಸಲು ಮತ್ತು ಯಶಸ್ಸನ್ನು ಸಾಧಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದಕ್ಕೆ ಶಶಾಂಕ್ ಅವರ ಪ್ರಯಾಣವು ಒಂದು ಉಜ್ವಲ ಉದಾಹರಣೆಯಾಗಿದೆ. ಅವರ ಕಥೆಯು ನಿಸ್ಸಂದೇಹವಾಗಿ ಅನೇಕ ಯುವ ವಿದ್ಯಾರ್ಥಿಗಳು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಸಹ ತಮ್ಮ ಕನಸುಗಳನ್ನು ಮುಂದುವರಿಸಲು ಪ್ರೇರೇಪಿಸುತ್ತದೆ.

[ad_2]
Source link

Leave a Comment

Click on the Ads to continue browsing. (Support the Developer)
👇👇CLICK ADS WAIT & BACK👇👇