[ad_1]
ಮೂಲಗಳ ಪ್ರಕಾರ ಈ ಆರು ಸಾಧಕರು ಕೂಡ 14 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಲ್ಲಿ ಈ ಅಪರೂಪದ ಮೈಲಿಗಲ್ಲು ತಲುಪಿದ ಕೇವಲ 24 ವಿದ್ಯಾರ್ಥಿಗಳಲ್ಲಿ ಹೆಸರು ಮಾಡಿದ್ದಾರೆ. ಕೇವಲ ಶೈಕ್ಷಣಿಕ ಪ್ರತಿಭೆಯಿಂದ ಮಾತ್ರವಲ್ಲ ತಮ್ಮ ಪ್ರಯಾಣದುದ್ದಕ್ಕೂ ಹಂಚಿಕೊಂಡ ಬಲವಾದ ಬಾಂಧವ್ಯದಿಂದಲೂ ಇವರ ಒಗ್ಗಟ್ಟು ಗುರುತಿಸಿಕೊಂಡಿದೆ.
ಕೋಟಾದ ತ್ರಿಮೂರ್ತಿಗಳು: ಸ್ನೇಹಿತರು, ಸಹಪಾಠಿಗಳು ಮತ್ತು ಉನ್ನತ ಸಾಧಕರು!
ಕೋಟಾದಲ್ಲಿ ನೆಲೆಸಿರುವ ಅರ್ನವ್ ಸಿಂಗ್, ರಜಿತ್ ಗುಪ್ತಾ ಮತ್ತು ಲಕ್ಷ್ಯ ಶರ್ಮಾ, ಮೂರು ವರ್ಷಗಳ ಕಾಲ ಒಂದೇ ಕೋಚಿಂಗ್ ಬ್ಯಾಚ್ನಲ್ಲಿ ಒಟ್ಟಿಗೆ ಅಧ್ಯಯನ ಮಾಡಿದರು. ಅವರಲ್ಲಿ ಇಬ್ಬರು ಒಂದೇ ಶಾಲೆಗೆ ಹೋಗಿದ್ದರು. ಶೈಕ್ಷಣಿಕ ಪಾಲುದಾರಿಕೆಯಾಗಿ ಪ್ರಾರಂಭವಾದದ್ದು ಶೀಘ್ರದಲ್ಲೇ ಗಾಢವಾದ ಸ್ನೇಹವಾಗಿ ಮಾರ್ಪಟ್ಟಿತು, ಈ ಸ್ನೇಹವೇ ಅವರಿಗೆ ಅಂದುಕೊಂಡದ್ದನ್ನು ಸಾಧಿಸುವ ಛಲವಾಗಿ ವರವಾಯಿತು ಮತ್ತು ಪ್ರೇರೇಪಿಸಿತು.
ಶೈಕ್ಷಣಿಕ ಸಾಧನೆ ಮಾಡಲು ಬಯಸುವವರಿಗೆ ಕೋಟಾ ಒಳ್ಳೆ ವಾತಾವರಣ!
ಕೋಟಾದ ವಾತಾವರಣ ಕೂಡ ಈ ಮೂವರ ಕನಸುಗಳಿಗೆ ಇಂಬು ನೀಡಿತು. ಈ ನಗರವು ಶೈಕ್ಷಣಿಕ ಸಾಧನೆ ಮಾಡುವವರಿಗೆ ಉತ್ತಮ ವಾತಾವರಣವನ್ನು ಕಲ್ಪಿಸಿದೆ. ತಲ್ವಾಂಡಿಯಲ್ಲಿರುವ ಕೋಚಿಂಗ್ ಹಬ್ನಿಂದ ಕೇವಲ 3 ಕಿ.ಮೀ ದೂರದಲ್ಲಿ ವಾಸಿಸುವ ಅರ್ನವ್, ಏನನ್ನಾದರೂ ಸಾಧಿಸಲು ನಮ್ಮನ್ನು ಪ್ರೇರೇಪಿಸುತ್ತಲೇ ಇರುತ್ತದೆ ಎಂದಿದ್ದಾರೆ. ಅನರ್ವ್, ಆಲ್ ಇಂಡಿಯಾ ರ್ಯಾಂಕ್ 11 ಅನ್ನು ಪಡೆದುಕೊಂಡು ತಮ್ಮ ಮಾತನ್ನು ನಿಜವಾಗಿಸಿದ್ದಾರೆ.
AIR 16 ಅಂಕಗಳನ್ನು ಗಳಿಸಿದ ಮತ್ತು ತನ್ನ XII ತರಗತಿಯಲ್ಲಿ 95% ಕ್ಕಿಂತ ಹೆಚ್ಚಿನ ಅಂಕಗಳ ನಿರೀಕ್ಷೆ ಹೊಂದಿರುವ ರಜಿತ್, ಭಾರತಾದಾದ್ಯಂತ ಸಾಕಷ್ಟು ವಿದ್ಯಾರ್ಥಿಗಳು ಕೋಟಾಕ್ಕೆ ಬಂದು ಅಧ್ಯಯನ ಮಾಡುತ್ತಾರೆ. ಇದುವೇ ನಮಗೆ ಪ್ರೇರಣೆ ನೀಡಿತು. ನಾವು ಇಲ್ಲಿನವರೇ ಆಗಿದ್ದುದರಿಂದ ನಮಗೆ ಸವಲತ್ತುಗಳಿದ್ದವು. ನನ್ನ ಕುಟುಂಬವನ್ನು ತೊರೆಯಬೇಕಾಗಿರಲಿಲ್ಲ ಹಾಗೂ ನನ್ನಮ್ಮನ ಕೈರುಚಿಯ ಅಡುಗೆಗಳನ್ನು ಮಿಸ್ ಮಾಡಿಕೊಳ್ಳಬೇಕಾದ ಪರಿಸ್ಥಿತಿಯೂ ಇರಲಿಲ್ಲ.
ಆದರೆ ಬೇರೆ ವಿದ್ಯಾರ್ಥಿಗಳು ತಮ್ಮ ಕುಟುಂಬವನ್ನು ಬಿಟ್ಟು ಇಲ್ಲಿ ಓದುತ್ತಿದ್ದರು. ಇದೆಲ್ಲವನ್ನೂ ನೋಡುವಾಗ ನಾವೇ ಅದೃಷ್ಟವಂತರು ಎಂದು ನಮಗನ್ನಿಸಿತು ಎಂದಿದ್ದಾರೆ. ಏರ್ 22 ನೇ ಅಂಕ ಗಳಿಸಿರುವ ಲಕ್ಷ್ಯ, ನಾವು ಮೂವರು ದಿನವಿಡೀ ಓದುತ್ತಲೇ ಇರಲಿಲ್ಲ. ಆಟ, ಊಟ ತಿಂಡಿ ಎಲ್ಲವನ್ನೂ ಹಂಚಿಕೊಂಡಿದ್ದೇವೆ. ನಮ್ಮ ಸ್ನೇಹವನ್ನು ಗಟ್ಟಿಗೊಳಿಸಿದೆವು. ನಾವು ಅಂಕಗಳನ್ನು ಮಾತ್ರವಲ್ಲ ಒಂದೊಳ್ಳೆಯ ನೆನಪುಗಳನ್ನು ನಿರ್ಮಿಸಿದ್ದೇವೆ ಎನ್ನುತ್ತಾರೆ.
ಕೋಟಾದ ಹೊರಗಿನ ವಿದ್ಯಾರ್ಥಿಗಳು: ಗುರಿಯೊಂದಿಗೆ ಒಂದಾದರು
ಈ ಮೂವರ ಆಪ್ತ ಸ್ನೇಹಿತರಾದ ಒಡಿಶಾದ ಓಂ ಪ್ರಕಾಶ್ ಬಹೇರಾ (AIR 1), ಹರಿಯಾಣದ ಸಕ್ಷಾಮ್ ಜಿಂದಾಲ್ (AIR 10), ಮತ್ತು ಜಾರ್ಖಂಡ್ನ ಎಂ.ಡಿ. ಅನಸ್ (AIR 17) ಕೂಡ ಒಂದೇ ಬ್ಯಾಚ್ನಲ್ಲಿ ಜೊತೆಯಾಗಿ ಅಧ್ಯಯನ ಮಾಡಿದ್ದಾರೆ.
ಒಟ್ಟಾಗಿ ಈ ಆರು ಜನ ಸವಾಲಿನ ತಯಾರಿಯ ಸಮಯದಲ್ಲಿ ಒಗ್ಗಟ್ಟಿನಿಂದ ಅಧ್ಯಯನ ಮಾಡಿದರು ಹಾಗೂ ಪರಸ್ಪರ ಬೆಂಬಲ ನೀಡುವ ವ್ಯವಸ್ಥೆಯನ್ನು ರೂಪಿಸಿದರು. ಓಂ ಪ್ರಕಾಶ್ ಅವರ ಸಾಧನೆಯು ಕಠಿಣ ಪರಿಶ್ರಮ ಮತ್ತು ಸರಿಯಾದ ಗೆಳೆಯರ ಬೆಂಬಲದೊಂದಿಗೆ ಪ್ರತಿಭೆ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ತೋರಿಸಿದೆ.
ಆರು ಜನರ ಚಿತ್ತ ಐಐಟಿ ಬಾಂಬೆಯತ್ತ
ಈ ಆರು ಸ್ನೇಹಿತರು ಬೇರೆ ಬೇರೆ ರ್ಯಾಂಕ್ಗಳನ್ನು ಗಳಿಸುವ ಮೂಲಕ ಪರೀಕ್ಷೆ ಎಷ್ಟು ಸ್ಪರ್ಧಾತ್ಮಕವಾಗಿರುತ್ತದೆ? ಹೇಗೆ ಓದಬೇಕು ಎಂಬುದನ್ನು ತೋರಿಸಿದ್ದಾರೆ.
ಇದೀಗ ಆರು ಜನರ ಭವಿಷ್ಯದ ದಾರಿಯೂ ನಿರ್ಧಾರವಾಗಿದೆ. ಎಲ್ಲಾ ಆರು ಸ್ನೇಹಿತರು ಭಾರತದ ಅತ್ಯಂತ ಪ್ರತಿಷ್ಠಿತ ಕೋರ್ಸ್ಗಳಲ್ಲಿ ಒಂದೆಂದು ಪರಿಗಣಿಸಲಾದ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಅನ್ನು ಮುಂದುವರಿಸುವ ಗುರಿಯನ್ನು ಹೊಂದಿದ್ದಾರೆ.
ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಓದುವುದು ನಮ್ಮೆಲ್ಲರ ಮುಂದಿನ ಗುರಿಯಾಗಿದೆ ಎಂದು ಅರ್ನವ್ ಹೆಮ್ಮೆಯಿಂದ ನುಡಿದಿದ್ದಾರೆ. ಮೇ 18 ರಂದು ನಡೆಯಲಿರುವ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ 2.5 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಈ ಆರು ವಿದ್ಯಾರ್ಥಿಗಳು ಯಶಸ್ಸು ಕೇವಲ ಅಂಕಗಳ ಬಗ್ಗೆ ಅಲ್ಲ, ನೀವು ಯಾವ ದಾರಿಯಲ್ಲಿ ನಡೆಯುತ್ತೀರಿ ಎಂಬುದರ ಬಗ್ಗೆಯೂ ಅವಲಂಬಿತವಾಗಿದೆ ಎಂಬುದನ್ನು ನೆನಪಿಸುತ್ತದೆ.
April 25, 2025 3:01 PM IST
Source link