[ad_1]
ಅತ್ಯಂತ ಕಡಿಮೆ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಇಂದಿಗೂ ಸಿನಿ ಪ್ರಿಯರ ಮನಸ್ಸಿನಲ್ಲಿ ಮರೆಯಲಾಗದ ಚಿತ್ರವಾಗಿದೆ. ಚಿತ್ರದ ಕೆಲವೊಂದು ಖ್ಯಾತ ಡೈಲಾಗ್‌ಗಳನ್ನು ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ ಎಂದರೆ ಆ ಚಿತ್ರದ ಖ್ಯಾತಿಯನ್ನು ಲೆಕ್ಕಹಾಕಬಹುದು.
ಖ್ಯಾತ ನಟ ನಟಿಯರೇ ನಟಿಸಿದ್ದ ಚಿತ್ರವಾಗಿತ್ತು ಶೋಲೆ: ಆಗಸ್ಟ್ 15, 1975 ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಧರ್ಮೇಂದ್ರ, ಹೇಮಾ ಮಾಲಿನಿ, ಹೀಗೆ ಖ್ಯಾತ ನಟ ನಟಿಯರೇ ಬಣ್ಣ ಹಚ್ಚಿದ್ದರು. ರಮೇಶ್ ಸಿಪ್ಪಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ಆ ಕಾಲದಲ್ಲಿ ಹೊಸ ಕ್ರಾಂತಿಯನ್ನೇ ಬರೆಯಿತು. 70 ರ ದಶಕದಲ್ಲಿ 3 ಕೋಟಿಯಲ್ಲಿ ತಯಾರಾದ ಈ ಚಿತ್ರ ಬಹು ಬೇಡಿಕೆ ಚಿತ್ರವಾಗಿ ಖ್ಯಾತಿ ಪಡೆದಿದೆ.
ಎಲ್ಲಿಯಾದರೂ ಇಂದಿನ ಕಾಲದಲ್ಲಿ ಶೋಲೆಯನ್ನು ನಿರ್ಮಿಸುತ್ತಿದ್ದರೆ ಎಷ್ಟು ಬಂಡವಾಳ ಬೇಕಾಗುತ್ತಿತ್ತು? ನಟ ನಟಿಯರು ಯಾರಾಗುತ್ತಿದ್ದರು ಹಾಗೂ ಅವರ ಸಂಭಾವನೆ ಎಷ್ಟಿರಬಹುದಿತ್ತು ಮೊದಲಾದ ಮಾಹಿತಿಗಳನ್ನು ತಿಳಿದುಕೊಳ್ಳೋಣ. 1975 ರಿಂದ 2025 ರವರೆಗೆ ಭಾರತೀಯ ರೂಪಾಯಿಯ ಖರೀದಿ ಶಕ್ತಿ ಗಮನಾರ್ಹವಾಗಿ ಕಡಿಮೆಯಾಗಿದೆ. ಸರಾಸರಿ ವಾರ್ಷಿಕ ಹಣದುಬ್ಬರ ದರ 7-8% ದಷ್ಟಿದ್ದು, 1975 ರಲ್ಲಿ 3 ಕೋಟಿ ರೂಪಾಯಿಗಳು ಈಗ ಸರಿಸುಮಾರು 150-200 ಕೋಟಿ ರೂಪಾಯಿಗಳಿಗೆ ಸಮನಾಗಿರುತ್ತದೆ.
1975 ರ ಸಮಯದಲ್ಲಿ ಚಲನಚಿತ್ರವು ಯಾವುದೇ ದುಬಾರಿ ವಿಎಫ್‌ಎಕ್ಸ್ ತಂತ್ರಜ್ಞಾನ ಅಥವಾ ಅತ್ಯಾಧುನಿಕ ಸಂಪಾದನಾ ತಂತ್ರಗಳನ್ನು ಬಳಸಲಿಲ್ಲ. ಸರಳವಾಗಿ ತಯಾರಾದ ಚಿತ್ರ ಶೋಲೆಯಲ್ಲಿ ನಟ, ನಟಿಯರು ನೈಜವಾಗಿ ನಟಿಸಿಯೇ ಚಿತ್ರವನ್ನು ಗೆಲ್ಲಿಸಿದ್ದರು. ವಿಎಫ್‌ಎಕ್ಸ್‌ನಲ್ಲಿ ಹೂಡಿಕೆ ಮಾಡುತ್ತಿದ್ದರು. ಇಂದಿನ ಜಮಾನಾದಲ್ಲಿ ಶೋಲೆ ಚಿತ್ರವನ್ನು ನಿರ್ಮಿಸಿದ್ದರೆ, ನಿರ್ಮಾಪಕರು ಬಹುಶಃ ವಿಎಫ್‌ಎಕ್ಸ್‌ನಲ್ಲಿ ಹೂಡಿಕೆ ಮಾಡುತ್ತಿದ್ದರು. ಈ ಚಿತ್ರವನ್ನು 2025 ರಲ್ಲಿ ನಿರ್ಮಿಸಿದ್ದರೆ ತಂತ್ರಜ್ಞಾನದಲ್ಲಿ ಗಣನೀಯ ಹೂಡಿಕೆ ಬೇಕಾಗುತ್ತದೆ:
ವಿಎಫ್‌ಎಕ್ಸ್ ಮತ್ತು ಸಿಜಿಐ (ಕಂಪ್ಯೂಟರ್-ರಚಿತ ಚಿತ್ರಣ): 50-80 ಕೋಟಿ ರೂ ಖರ್ಚಾಗುತ್ತಿತ್ತು. ಡಿಜಿಟಲ್ ಛಾಯಾಗ್ರಹಣ: 10-20 ಕೋಟಿ ರೂ ವೆಚ್ಚವಾಗುತ್ತಿತ್ತು. ಡ್ರೋನ್ ಶಾಟ್‌ಗಳು ಮತ್ತು ಹೈಟೆಕ್ ಕ್ಯಾಮೆರಾಗಳು: 5-10 ಕೋಟಿ ರೂ ಖರ್ಚಾಗುತ್ತಿತ್ತು.
1975 ರಲ್ಲಿ, ಈ ಚಿತ್ರವನ್ನು ಪ್ರಾಥಮಿಕವಾಗಿ ಕರ್ನಾಟಕದ ರಾಮನಗರ ಪ್ರದೇಶದಲ್ಲಿ ಚಿತ್ರೀಕರಿಸಲಾಯಿತು. ಇಂದು, ಅದೇ ಸ್ಥಳದಲ್ಲಿ ಒಂದು ಚಲನಚಿತ್ರ ಸೆಟ್‌ಗೆ 15-25 ಕೋಟಿ ರೂ. ವೆಚ್ಚವಾಗುತ್ತದೆ. ಇದೆಲ್ಲಾ ನೋಡುವಾಗ ಇಂದಿನ ಕಾಲದಲ್ಲಿ ಶೋಲೆ ಚಿತ್ರ ನಿರ್ಮಾಣಕ್ಕೆ ಭರ್ಜರಿ ಹೂಡಿಕೆಯೇ ಬೇಕಾಗುತ್ತದೆ.
ಇನ್ನು ತಾರಾಗಣದ ವಿಷಯಕ್ಕೆ ಬಂದಾಗ ಯಾರ್ಯಾರು ಬಣ್ಣ ಹಚ್ಚುತ್ತಿದ್ದರು? ಈಗ ಶೋಲೆ ನಿರ್ಮಿಸುವುದಾದರೆ ಶಾರುಖ್ ಖಾನ್, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರಂತಹ ಪ್ರಮುಖ ತಾರೆಯರನ್ನು ಬಳಸಿಕೊಳ್ಳಬೇಕಾಗುತ್ತಿತ್ತು.
ಇವರೆಲ್ಲಾ ದುಬಾರಿ ತಾರೆಯರಾಗಿ ಖ್ಯಾತಿ ಪಡೆದಿರುವುದರಿಂದ ಅವರ ಸಂಭಾವನೆಯೇ ಸುಮಾರು 100-150 ಕೋಟಿ ರೂ.ಗಳಾಗುತ್ತಿತ್ತು. ಇಂದಿನ ಶೋಲೆ ಚಿತ್ರದ ಖರ್ಚು ವೆಚ್ಚ 300 ರಿಂದ 400 ಕೋಟಿ. ಆದ್ದರಿಂದ, 1975 ರಲ್ಲಿ 3 ಕೋಟಿ ರೂ.ಗಳಿಗೆ ನಿರ್ಮಾಣವಾದ ಶೋಲೆ ಚಿತ್ರದ ಈ ಕಾಲದ ನಿರ್ಮಾಣದ ವೆಚ್ಚವನ್ನು ನಾವು ಪರಿಗಣಿಸಿದರೆ, 2025 ರಲ್ಲಿ ಚಿತ್ರದ ಒಟ್ಟು ನಿರ್ಮಾಣ ವೆಚ್ಚ 300-400 ಕೋಟಿ ರೂ.ಗಳ ನಡುವೆ ಇರಬಹುದು ಎಂದು ಅಂದಾಜಿಸಬಹುದು.
Bangalore,Karnataka
February 08, 2025 8:17 AM IST
Source link