[ad_1]
ಆದರಂತೆ, ಈ ಭರ್ತಿ ಅಭಿಯಾನವು ಸಾಮಾನ್ಯ ಬ್ಯಾಂಕಿಂಗ್ ಸೇವೆಗಳ ಬೆಳವಣಿಗೆಯ ಜೊತೆಗೆ ಬ್ಯಾಂಕಿನ ತಾಂತ್ರಿಕ ಸಾಮರ್ಥ್ಯವನ್ನು ವೃದ್ಧಿಸುವ ಗುರಿಯನ್ನು ಹೊಂದಿದೆ. SBI ತನ್ನ ಡಿಜಿಟಲ್ ಚಾನೆಲ್‌ಗಳನ್ನು ಬಲಪಡಿಸಲು ತಂತ್ರಜ್ಞಾನದಲ್ಲಿ ಗಣನೀಯ ಹೂಡಿಕೆ ಮಾಡಿದೆ, ಮತ್ತು ಈ ಭರ್ತಿ ಯೋಜನೆಯು ಈ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಕನ್ನಡದಲ್ಲಿ ವಿವರಿಸಲಾಗಿದೆ.
ಭರ್ತಿ ಅಭಿಯಾನದ ಮುಖ್ಯಾಂಶಗಳನ್ನು ನೋಡುವುದಾದರೆ, SBI 2025-26ನೇ ಆರ್ಥಿಕ ವರ್ಷದಲ್ಲಿ 18,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಇದು ಕಳೆದ 10 ವರ್ಷಗಳಲ್ಲಿನ ಅತಿದೊಡ್ಡ ಭರ್ತಿ ಅಭಿಯಾನವಾಗಿದ್ದು, ಇದರಲ್ಲಿ, 13,500 ರಿಂದ 14,000 ಹುದ್ದೆಗಳು. ಇವು ಸಾಮಾನ್ಯ ಬ್ಯಾಂಕಿಂಗ್ ಕಾರ್ಯಾಚರಣೆಗಳಿಗೆ ಕಿರಿಯ ಸಹಾಯಕರ ಹುದ್ದೆಗಳಿಗೆ ಸಂಬಂಧಿಸಿವೆ. ಇನ್ನು ಸುಮಾರು 3,000 ಹುದ್ದೆಗಳು ಪ್ರೊಬೇಷನರಿ ಆಫೀಸರ್ (PO) ಮತ್ತು ಲೋಕಲ್ ಬೇಸ್ಡ್ ಆಫೀಸರ್ (LBO) ಹಾಗೂ 1,600 ಹುದ್ದೆಗಳು ತಾಂತ್ರಿಕ ಮತ್ತು ಡಿಜಿಟಲ್ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿವೆ.
ಇನ್ನು ಇಷ್ಟು ದೊಡ್ಡ ನೇಮಕಾತಿಗೆ ಕಾರಣಗಳನ್ನು ನೋಡುವುದಾದರೆ, ನಿವೃತ್ತಿಯಿಂದ ಖಾಲಿಯಾಗಿರುವ ಹುದ್ದೆಗಳ ಭರ್ತಿ ಇದರ ಜೊತೆಗೆ, ದೇಶಾದ್ಯಂತ SBI ಶಾಖೆಗಳ ವಿಸ್ತರಣೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಹಾಗೂ ಫಿನ್‌ಟೆಕ್ ಕ್ಷೇತ್ರದಲ್ಲಿ ಸಾಮರ್ಥ್ಯ ವೃದ್ಧಿಗಾಗಿ. ಆದರೆ, ಈ ಭರ್ತಿ ಯೋಜನೆಯನ್ನು SBI ಅಧ್ಯಕ್ಷ ಸಿ.ಎಸ್. ಶೆಟ್ಟಿ ಅವರು 2024-25ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ಅರ್ಜಿ ಸಲ್ಲಿಸಲು ಅರ್ಹತೆ ಏನು?
ಇನ್ನು ನೇಮಕಾತಿಗಳಿಗೆ ಅರ್ಜಿ ಸಲ್ಲಿಸಲು, ವ್ಯಕ್ತಿಯೊಬ್ಬ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಇದರೊಂದಿಗೆ ಕ್ಲರ್ಕ್ ಪದವಿಗೆ ವಯಸ್ಸಿನ ಮಿತಿಯು ಸಾಮಾನ್ಯವಾಗಿ 20 ರಿಂದ 28 ವರ್ಷಗಳ ನಡುವೆ ಇರಬಹುದು, ಆದರೆ, ಮೀಸಲಾತಿ ವರ್ಗಗಳಿಗೆ ಸಡಿಲಿಕೆ ಇರುತ್ತದೆ. ಆದರೆ, ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ವಯಸ್ಸಿನ ಮಿತಿ ಸಾಮಾನ್ಯವಾಗಿ 21 ರಿಂದ 30 ವರ್ಷಗಳು ಮತ್ತು ಸಿಸ್ಟಮ್ ಆಫೀಸರ್/ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಎಂಜಿನಿಯರಿಂಗ್, ಐಟಿ, ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ. ಕೆಲವು ಹುದ್ದೆಗಳಿಗೆ ಕೆಲಸದ ಅನುಭವ ಕಡ್ಡಾಯವಾಗಿರುತ್ತದೆ.
ಮುಂದುವರೆದು, ಆಯ್ಕೆ ಪ್ರಕ್ರಿಯೆಯು ಮೊದಲಿಗೆ ಪ್ರಾಥಮಿಕ ಪರೀಕ್ಷೆಯಾಗಿ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ರೀಸನಿಂಗ್, ಇಂಗ್ಲಿಷ್, ಜನರಲ್ ಅವೇರ್‌ನೆಸ್, ಮತ್ತು ಕಂಪ್ಯೂಟರ್ ಜ್ಞಾನದಂತಹ ವಿಷಯಗಳನ್ನು ಒಳಗೊಂಡಿರುತ್ತದೆ. ಇದಾದ ನಂತರ ಮುಖ್ಯ ಪರೀಕ್ಷೆಯು ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ದ್ವಿತೀಯ ಹಂತದ ಪರೀಕ್ಷೆ. ತದನಂತರ ಸಂದರ್ಶನ ಪ್ರಕ್ರಿಯೆಯು ಕೆಲವು ಹುದ್ದೆಗಳಿಗೆ (ವಿಶೇಷವಾಗಿ PO ಮತ್ತು SO) ಸಂದರ್ಶನವೂ ಇರುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ/EWS/OBC ಅಭ್ಯರ್ಥಿಗಳಿಗೆ: ಸುಮಾರು ರೂ. 750 (ನಾನ್-ರೀಫಂಡಬಲ್). SC/ST/PwBD ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ ಇರಬಹುದು. ಶುಲ್ಕವನ್ನು ಆನ್‌ಲೈನ್ ಪಾವತಿ ಗೇಟ್‌ವೇ ಮೂಲಕ ಪಾವತಿಸಬೇಕು.
ಇನ್ನು ಅರ್ಜಿ ಸಲ್ಲಿಕೆ ಮತ್ತು ಪರೀಕ್ಷೆಯ ವೇಳಾಪಟ್ಟಿಯ ಪ್ರಕಟಣೆ ಬಾಕಿ ಇದೆ.
ಒಟ್ಟಾರೆಯಾಗಿ, SBIನ 18,000 ಉದ್ಯೋಗಿಗಳ ಭರ್ತಿ ಯೋಜನೆಯು ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಒಂದು ದೊಡ್ಡ ಅವಕಾಶವಾಗಿದೆ. ಕ್ಲರ್ಕ್, ಪ್ರೊಬೇಷನರಿ ಆಫೀಸರ್, ಮತ್ತು ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ನೇಮಕಾತಿಯು ದೇಶಾದ್ಯಂತ SBI ಶಾಖೆಗಳನ್ನು ಬಲಪಡಿಸಲಿದೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ಸೃಷ್ಟಿಸಲಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಆಸಕ್ತ ಅಭ್ಯರ್ಥಿಗಳು ತಯಾರಿಯನ್ನು ಆರಂಭಿಸಿ, ಅಧಿಕೃತ ಅಧಿಸೂಚನೆಗಾಗಿ ಕಾಯಬೇಕು.
Mumbai,Maharashtra
Source link