[ad_1]
ಚಾಟ್ ಜಿಪಿಟಿಯ ಕೃತಕ ಬುದ್ಧಿಮತ್ತೆ ಕಂಪನಿ ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ “ನಮ್ಮ ಸವಾಲುಗಳು ಆಸಕ್ತಿದಾಯಕವಾಗಿವೆ ಮತ್ತು ಪ್ರಮಾಣವು ದೊಡ್ಡದಾಗಿದೆ. ನೀವು ಮೂಲಸೌಕರ್ಯ, ದೊಡ್ಡ ಪ್ರಮಾಣದ ಕಂಪ್ಯೂಟಿಂಗ್ ವ್ಯವಸ್ಥೆಗಳಲ್ಲಿ ಆಸಕ್ತಿ ಹೊಂದಿದ್ದರೆ, ಇದೀಗ OpenAI ನಲ್ಲಿ ನಡೆಯುತ್ತಿರುವ ಈ ಅವಕಾಶವನ್ನು ಸದುಪಯೋಗಪಡೆಸಿಕೊಳ್ಳಿ. ದಯವಿಟ್ಟು ನಮ್ಮೊಂದಿಗೆ ಸೇರುವುದನ್ನು ಪರಿಗಣಿಸಿ! ನಮಗೆ ನಿಮ್ಮ ಸಹಾಯ ತೀರಾ ಅಗತ್ಯವಿದೆ,” ಎಂದು ಅವರು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ X ನಲ್ಲಿ ಬರೆದಿದ್ದಾರೆ.
ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಪೋಸ್ಟ್ ಮಾಡಿದ್ದೇನು?
ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಏಪ್ರಿಲ್ 14 ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಥ್ರೆಡ್‌ನಲ್ಲಿ ಹೀಗೆ ಬರೆದಿದ್ದಾರೆ, “ವಿಶೇಷವಾಗಿ ನೀವು ಒಂದು ವ್ಯವಸ್ಥೆಯಿಂದ ಹೆಚ್ಚಿನ ಕಾರ್ಯಕ್ಷಮತೆಯನ್ನು ಹೇಗೆ ಪಡೆಯುವುದು ಎಂದು ಯೋಚಿಸಿದ್ದರೆ, ನಾವು ನಿಮ್ಮೊಂದಿಗೆ ಮಾತನಾಡಲು ಇಷ್ಟಪಡುತ್ತೇವೆ. ನೀವು ಕಂಪೈಲರ್ ವಿನ್ಯಾಸ ಅಥವಾ ಪ್ರೋಗ್ರಾಮಿಂಗ್ ಭಾಷಾ ವಿನ್ಯಾಸದಲ್ಲಿ ಹಿನ್ನೆಲೆ ಹೊಂದಿದ್ದರೆ, ನಾವು ನಿಮಗಾಗಿ ಉತ್ತಮವಾದದ್ದನ್ನು ಹೊಂದಿರಬಹುದು.” ಎಂದು ಬರೆದಿದ್ದಾರೆ. ಇದರಿಂದ ಉದ್ಯೋಗಿಗಳು ಅಥವಾ ಆಸಕ್ತಿ ಹೊಂದಿರುವವರು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಬಹುದು.
if you are interested in infrastructure and very large-scale computing systems, the scale of what’s happening at openai right now is insane and we have very hard/interesting challenges.
please consider joining us! we could desperately use your help.
— Sam Altman (@sama) April 13, 2025
ಉದ್ಯೋಗಗಳು ಎಲ್ಲಿರುತ್ತದೆ?
ಓಪನ್‌ಎಐನಲ್ಲಿ ಕೆಲಸ ಪಡೆದ ನಂತರ, ಕೆಲಸದ ಸ್ಥಳ ಸ್ಯಾನ್ ಫ್ರಾನ್ಸಿಸ್ಕೊ, ಸಿಯಾಟಲ್ ಮತ್ತು ನ್ಯೂಯಾರ್ಕ್ ಆಗಿರುತ್ತದೆ. OpenAI ನಲ್ಲಿ ಹೆಚ್ಚಿನ ಪಾತ್ರಗಳು ರಿಮೋಟ್ ಸ್ನೇಹಿಯಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ, ಒಬ್ಬರು ಅಮೆರಿಕಕ್ಕೆ ಹೋಗಬೇಕಾಗುತ್ತದೆ.
ಓಪನ್‌ಎಐನಲ್ಲಿ ಯಾವ ಯೋಜನೆಗಳಿಗೆ ನೇಮಕಾತಿ ನಡೆಯುತ್ತಿದೆ?
ಓಪನ್‌ಎಐನ ಈ ನೇಮಕಾತಿ ಅಭಿಯಾನದ ಹಿಂದೆ ಹಲವು ದೊಡ್ಡ ಯೋಜನೆಗಳಿವೆ. ಅವುಗಳು ಈ ಕೆಳಗಿನಂತಿವೆ.
ಈ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಹೆಚ್ಚಿನ ಮಾಹಿತಿಗಾಗಿ ChatGPT ಕಂಪನಿ OpenAI ಅಧಿಕೃತ ವೆಬ್ಸೈಟ್ https://openai.com/careers/ಗೆ ಭೇಟಿ ನೀಡಿ ಪರಿಶೀಲಿಸಬಹುದು. ಮತ್ತು ಸ್ವತಃ ಸಿಇಒ ಸ್ಯಾಮ್ ಆಲ್ಟ್‌ಮನ್ ಆಹ್ವಾನವನ್ನು ನೀವು ನಂಬಿ, ಈ ಅವಕಾಶವನ್ನು ಸದುಪಯೋಗಪಡೆಸಿಕೊಳ್ಳಬಹುದು.
April 22, 2025 12:49 PM IST
Source link