[ad_1]
ಹೀಗೆ ಮಕ್ಕಳು ಬೇಗನೆ ಸಾಮಾಜಿಕ ಮಾಧ್ಯಮಗಳ ಮತ್ತು ರೀಲ್ಸ್‌ಗಳ ಗೀಳು ಅತಿಯಾಗಿ ಅಂಟಿಸಿಕೊಳ್ಳುವುದನ್ನು ನಾವೆಲ್ಲಾ ನೋಡುತ್ತಿದ್ದೇವೆ.
ಇದೆಲ್ಲಾ ಮನಸ್ಸನ್ನು ವಿಚಲಿತಗೊಳಿಸುವ ಅಂತರ್ಜಾಲ ಸಾಧನಗಳಿಂದ ತಮ್ಮನ್ನು ದೂರವಿರಿಸಿಕೊಂಡ ಅವಳಿ ಸಹೋದರಿಯರು ಮಹತ್ವದ ಸಾಧನೆ ಮಾಡಿ ತೋರಿಸಿದ್ದಾರೆ.
24 ವರ್ಷ ವಯಸ್ಸಿನ ಅವಳಿ ಸಹೋದರಿಯರಾದ ರಹೀನ್ ಮತ್ತು ರಿಬಾ ಹಫಿಜ್ಜಿ ಅವರು ತಮ್ಮ ಬಾಲ್ಯದಲ್ಲಿ ವೈದ್ಯರಾಗಬೇಕೆಂದು ನಿರ್ಧರಿಸಿದ್ದಾಗ ಅವರಿಬ್ಬರು ಮೊಬೈಲ್ ಫೋನಿನ ಗೀಳಿನಿಂದ ತಮ್ಮನ್ನು ತಾವು ದೂರವೇ ಇರಿಸಿಕೊಂಡಿದ್ದರು.
ಅವಳಿಗಳು ಎಂಬಿಬಿಎಸ್ ಪರೀಕ್ಷೆಯಲ್ಲಿ ಒಂದೇ ರೀತಿಯ ಅಂಕಗಳನ್ನು ಪಡೆದಿದ್ದಾರೆ
ಈ ಅವಳಿ ಸಹೋದರಿಯರ ಕನಸಿನ ಸಾಧನೆಯಲ್ಲಿ ಮತ್ತೊಂದು ಆಶ್ಚರ್ಯಕರವಾದ ಸಂಗತಿ ಎಂದರೆ ಅದು ಈ ಇಬ್ಬರು ವಡೋದರಾದ ಗುಜರಾತ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸೊಸೈಟಿ ಕಾಲೇಜಿನಲ್ಲಿ ಓದುತ್ತಿದ್ದು, ಪರೀಕ್ಷೆಯಲ್ಲಿ ಒಂದೇ ರೀತಿಯ 935 ಅಂಕಗಳನ್ನು (66.8%) ಗಳಿಸಿರುವುದು ಅಂತ ಹೇಳಬಹುದು.
ನೀವು ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್ ಅನ್ನು ಏಕೆ ಎಂದಿಗೂ ಬಳಸಲಿಲ್ಲ ಎಂದು ಕೇಳಿದಾಗ, ರಿಬಾ “ನಾನು ನನ್ನ ಸಮಯವನ್ನು ನಿಷ್ಪ್ರಯೋಜಕ ವಿಷಯಗಳಿಗೆ ವ್ಯರ್ಥ ಮಾಡಲು ಬಯಸಲಿಲ್ಲ.
ಅಂತಹ ವೇದಿಕೆಗಳಿಂದ ಸಾಕಷ್ಟು ಸಮಯ ಹಾಳಾಗುತ್ತದೆ ಮತ್ತು ಅವುಗಳಿಂದ ಅಧ್ಯಯನದ ಮೇಲೆ ಸರಿಯಾಗಿ ಗಮನ ಹರಿಸಲು ಸಹ ಸಾಧ್ಯವಾಗುವುದಿಲ್ಲ,’ ಅಂತ ಹೇಳುತ್ತಾರೆ ಮತ್ತು ಈ ಮಾತಿಗೆ ರಹಿನ್ ಸಹ ಒಪ್ಪುತ್ತಾರೆ.
ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರದ ಕಾರಣ ಅವರ ಜೀವನ ತುಂಬಾನೇ ನೀರಸವಾಗಿದೆ ಅಂತ ಅವರು ಭಾವಿಸುತ್ತಾರೆಯೇ? ಅಂತ ಕೇಳಿದ್ದಕ್ಕೆ ರಹಿನ್ ಅವರು ನಗುತ್ತಾ ‘ಸಾಮಾಜಿಕ ಮಾಧ್ಯಮದಲ್ಲಿರುವವರು ಖಂಡಿತವಾಗಿಯೂ ಹಾಗೆಯೇ ಭಾವಿಸುತ್ತಾರೆ.
ಜೀವನವೆಂದರೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವುದಷ್ಟೆ ಅಲ್ಲ, ಇನ್ನೂ ಅನೇಕ ರೀತಿಯ ಆರೋಗ್ಯಕರ ಹವ್ಯಾಸಗಳಿಂದಲೂ ಸಹ ಮನವನ್ನು ರಂಜಿಸಿಕೊಳ್ಳಬಹುದು,’ ಅಂತ ಹೇಳುತ್ತಾರೆ.
ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದಿರುವ ಇವರಿಗೆ ಇವೆಯಂತೆ ಈ ಹವ್ಯಾಸಗಳು..
ರಹಿನ್ ಅವರಿಗೆ ಚಿತ್ರ ಬಿಡಿಸುವ, ಮೆಹೆಂದಿ ಬಿಡಿಸುವ ಮತ್ತು ಕರಕುಶಲ ಕೆಲಸ ಮಾಡುವ ಅನೇಕ ರೀತಿಯ ಆರೋಗ್ಯಕರ ಹವ್ಯಾಸಗಳಿವೆಯಂತೆ.
‘ಸಾಮಾಜಿಕ ಮಾಧ್ಯಮಗಳು ಅನೇಕ ರೀತಿಯ ಕ್ಷುಲ್ಲಕ ವಿಷಯಗಳಿಂದ ತುಂಬಿವೆ, ದಿನದ ಸುದ್ದಿಗಳನ್ನು ನಾವು ನ್ಯೂಸ್ ಪೋರ್ಟಲ್‌ಗಳಲ್ಲಿ ಓದಿ ತಿಳಿದುಕೊಳ್ಳುತ್ತೇವೆ,’ ಅಂತ ಈ ಅವಳಿ ಸಹೋದರಿಯರು ಹೇಳುತ್ತಾರೆ.
ಬರೀ ಓದುತ್ತಾ ಕುಳಿತುಕೊಳ್ಳುವುದು ಬೇಸರ ಅಂತ ಅನ್ನಿಸುವುದಿಲ್ಲವೇ ಅಂತ ಕೇಳಿದ ಪ್ರಶ್ನೆಗೆ ರಹಿನ್ ನಗುತ್ತಾ, ‘ಯಾರಾದರೂ ಅದನ್ನು ಎತ್ತಿ ತೋರಿಸಿದಾಗ ಮತ್ತು ಅದರ ಬಗ್ಗೆ ಯೋಚಿಸಿದಾಗ ಮಾತ್ರವೆ ನಮ್ಮ ಜೀವನ ನೀರಸವಾಗಿದೆ ಅಂತ ನಮಗೆ ಅನ್ನಿಸುತ್ತದೆ.
ನಾವು ಅಧ್ಯಯನದಲ್ಲಿ ತುಂಬಾನೇ ಮಗ್ನರಾಗಿದ್ದೇವೆ ಮತ್ತು ಪ್ರಸ್ತುತ, ಅದು ನಮಗೆ ತುಂಬಾನೇ ಸಂತೋಷ ನೀಡುತ್ತಿದೆ,’ ಅಂತ ಹೇಳುತ್ತಾರೆ. ಈ ಅವಳಿ ಸಹೋದರಿಯರು ವೈದ್ಯಕೀಯ ಕಾಲೇಜಿನ ಮೆಟ್ಟಿಲು ಹತ್ತಿದಾಗ ಎರಡನೇ ವರ್ಷದವರೆಗೆ ತಮ್ಮ ನಡುವೆ ಒಂದು ಫೋನ್ ಅನ್ನು ಇರಿಸಿಕೊಂಡಿದ್ದರಂತೆ.
‘ನಾವು ನಮ್ಮ ದಿನದ ಹೆಚ್ಚಿನ ಸಮಯವನ್ನು ಒಟ್ಟಿಗೆ ಕಳೆಯುತ್ತೇವೆ’ ಎಂದು ರಹಿನ್ ಹೇಳುತ್ತಾರೆ, ‘ಆದ್ದರಿಂದ, ನಾವು ಎಂದಿಗೂ ಎರಡು ಫೋನ್‌ಗಳನ್ನು ಹೊಂದುವ ಹಂಬಲವಾಗಲಿ ಅಥವಾ ಬಯಕೆಯಾಗಲಿ ಅನುಭವಿಸಲಿಲ್ಲ, ಎರಡು ಫೋನಿನ ಖರ್ಚು ನಮಗ್ಯಾಕೆ’ ಅಂತ ಹೇಳಿದರು.
ಈ ಅವಳಿ ಸಹೋದರಿಯರು ಮುಂದೆ ಎಂಡಿ ಓದಲು ಬಯಸುತ್ತಾರಂತೆ..
ರಿಬಾ ಮೆಡಿಸಿನ್‌ನಲ್ಲಿ ಎಂಡಿ ಓದಲು ಯೋಜಿಸುತ್ತಿದ್ದಾರೆ, ರಹಿನ್ ಸರ್ಜರಿಯಲ್ಲಿ ಪರಿಣತಿ ಹೊಂದಲು ಬಯಸುತ್ತಿದ್ದಾರೆ.
‘ನಮಗೆ ಸರ್ಕಾರಿ ಅನುದಾನಿತ ಸೀಟುಗಳು ಸಿಕ್ಕರೆ ಮಾತ್ರವೇ, ನಾವು ನಮ್ಮ ವೈದ್ಯಕೀಯ ಅಧ್ಯಯನವನ್ನು ಮುಂದುವರಿಸುತ್ತೇವೆ. ನಮ್ಮ ತಾಯಿ ವೈದ್ಯಕೀಯ ಶಿಕ್ಷಣಕ್ಕೆ ಅಗತ್ಯವಾದ ಭಾರಿ ಶುಲ್ಕವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಮತ್ತು ನಾವು ಉತ್ತಮ ಅಂಕಗಳನ್ನು ಗಳಿಸಿದರೆ ಮಾತ್ರ ಸರ್ಕಾರಿ ಕೋಟಾದ ಮೂಲಕ ಪ್ರವೇಶ ಪಡೆಯಬಹುದು ಎಂದು ನಮಗೆ ತಿಳಿದಿತ್ತು, ಹಾಗಾಗಿ ಮೊದಲಿನಿಂದಲೂ ಚೆನ್ನಾಗಿ ಓದಿದೆವು,’ ಅಂತ ಹೇಳುತ್ತಾರೆ ಈ ಸಹೋದರಿಯರು.
ರಿಬಾ ನೀಟ್‌ನಲ್ಲಿ 514 ಅಂಕಗಳನ್ನು ಮತ್ತು ರಹಿನ್ 532 ಅಂಕಗಳನ್ನು ಗಳಿಸಿದರು, ಇದರಿಂದಾಗಿ ಅವರು ಗುಜರಾತ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸೊಸೈಟಿ ಕಾಲೇಜಿನಲ್ಲಿ ಪ್ರವೇಶವನ್ನು ಪಡೆದರು.
Bangalore [Bangalore],Bangalore,Karnataka
Source link