Job Alert: ಅತಿಥಿ ಶಿಕ್ಷಕರು/ಉಪನ್ಯಾಸಕರು ಹಾಗೂ ಭೋದಕೇತರ ಸಿಬ್ಬಂದಿಗಳ ಹುದ್ದೆಗೆ ಅರ್ಜಿ ಆಹ್ವಾನ! | Job Opportunity in Mysuru Applicants apply here

[ad_1]

Last Updated:

ಏಕಲವ್ಯ ಮಾದರಿ ವಸತಿ ಶಾಲೆ ಇಲ್ಲಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರು/ಉಪನ್ಯಾಸಕರು ಹಾಗೂ ಭೋದಕೇತರ ಸಿಬ್ಬಂದಿಗಳ ಹುದ್ದೆಗಳು ಖಾಲಿ ಇದ್ದು ಅರ್ಜಿ ಅಹ್ವಾನಿಸಲಾಗಿದೆ.

ಸಾಂದರ್ಭಿಕ ಚಿತ್ರಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಭಾರತ ಸರ್ಕಾರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ನವದೆಹಲಿ (Government of India Ministry of Tribal Affairs, New Delhi) ಇವರ ಅನುದಾನದ ಅಡಿಯಲ್ಲಿ, ಕರ್ನಾಟಕ ಪರಿಶಿಷ್ಟ ಪಂಗಡಗಳ ವಸತಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಹೆಚ್.ಡಿ.ಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ, ಸೊಳ್ಳೆಪುರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕಲವ್ಯ ಮಾದರಿ ವಸತಿ ಶಾಲೆ ಇಲ್ಲಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರು/ಉಪನ್ಯಾಸಕರು ಹಾಗೂ ಭೋದಕೇತರ ಸಿಬ್ಬಂದಿಗಳ ಹುದ್ದೆಗಳು ಖಾಲಿ ಇದ್ದು ಅರ್ಜಿ ಅಹ್ವಾನಿಸಲಾಗಿದೆ.

ಖಾಲಿ ಇರುವ ಹುದ್ದೆಗಳ ಮತ್ತು ವಿದ್ಯಾರ್ಹತೆ ಕನ್ನಡ (TGT), ಇಂಗ್ಲೀಷ್ (TGT), ಗಣಿತ (TGT), ವಿಜ್ಞಾನ (TGT), ಸಮಾಜ ವಿಜ್ಞಾನ, (TGT), ಸಂಬಂಧಪಟ್ಟ ವಿಷಯದಲ್ಲಿ ಪದವಿ ಹೊಂದಿರಬೇಕು ಹಾಗೂ ಬಿ.ಇಡಿ , ಸಿಟಿಇಟಿ ಕಡ್ಡಾಯ: ಸಂಗೀತ(TGT) ಸಂಗೀತ ವಿಷಯದಲ್ಲಿ ಪದವಿ ಹೊಂದಿರಬೇಕು. ದೈಹಿಕ ಶಿಕ್ಷಣ ಶಿಕ್ಷಕರು (ಮಹಿಳೆ) (TGT) ದೈಹಿಕ ಶಿಕ್ಷಣ ವಿಷಯದಲ್ಲಿ ಪದವಿ ಹೊಂದಿರಬೇಕು.

ಕನ್ನಡ (PGT), ಇಂಗ್ಲೀಷ್ (PGT), ಭೌತಶಾಸ್ತ್ರ (PGT), ರಸಾಯನಶಾಸ್ತ್ರ (Pಉಖಿ), ಜೀವಶಾಸ್ತ್ರ (PGT) ಸಂಬoದಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು ಹಾಗೂ ಬಿ.ಇಡಿ ಕಡ್ಡಾಯ. ಕಂಪ್ಯೂಟರ್ ವಿಜ್ಞಾನ PGT) ಕಂಪ್ಯೂಟರ್ ವಿಜ್ಞಾನ ವಿಷಯದಲ್ಲಿ ಯಾವುದಾದರೂ ಎಂಎಸ್ಸಿ, ಎಂಸಿಎ, ಎಂಇ ಅಥವಾ ಎಂಟೆಕ್ ಪದವಿ ಹೊಂದಿರಬೇಕು. ಸಲಹೆಗಾರರು ಮನೋವಿಜ್ಞಾನ/ವೈದ್ಯಕೀಯ ಮನೋವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.

ವೇತನ:

ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರಿಗೆ ಒಂದು ಗಂಟೆಗೆ 300 ರೂಪಾಯಿಯಂತೆ, ಕಾಲೇಜಿನಲ್ಲಿ ಪಾಠ ಮಾಡುವ ಉಪನ್ಯಾಸಕರಿಗೆ ಒಂದು ಗಂಟೆಗೆ 320 ರೂಪಾಯಿಯಂತೆ ಗರಿಷ್ಠ ₹ 42,000 ಸಂಬಳ ಸಿಗುತ್ತದೆ ಹಾಗೂ ವಿಶೇಷ ತರಗತಿ ಸಹ ತೆಗೆದುಕೊಳ್ಳಬೇಕು. ಅರ್ಜಿ ಸಲ್ಲಿಸಲು ಏಪ್ರಿಲ್ 25 ಕೊನೆಯ ದಿನವಾಗಿದೆ. ಅಂದು ಬೆಳಿಗ್ಗೆ 9 ಗಂಟೆಯೊಳಗೆ ಅರ್ಜಿ ಹಾಕಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088098700, 7206793200 ನ್ನು ಹೆಚ್.ಡಿ ಕೋಟೆಯ ಸೊಳ್ಳೆಪುರ ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[ad_2]
Source link

Leave a Comment