IRCTC Recruitment 2025: IRCTC ಯಲ್ಲಿ ಉದ್ಯೋಗಾವಕಾಶ, 67000 ಸಂಬಳ! ಲಿಖಿತ ಪರೀಕ್ಷೆ ಇಲ್ಲದೇ ಮ್ಯಾನೇಜರ್ ಪೋಸ್ಟ್​ / IRCTC Recruitment 2025: Apply for Manager Post with ₹67,000 Salary – No Written Exam Required!

[ad_1]

Last Updated:

ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ (IRCTC) ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಿದೆ. ಈ ಹುದ್ದೆಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಅದಕ್ಕೂ ಮುನ್ನ ಕೆಳಗಿನ ಮಾಹಿತಿಯನ್ನು ಗಮನವಿಟ್ಟು ಓದಿ.

IRCTCನಲ್ಲಿ ಉದ್ಯೋಗಾವಕಾಶIRCTCನಲ್ಲಿ ಉದ್ಯೋಗಾವಕಾಶ
IRCTCನಲ್ಲಿ ಉದ್ಯೋಗಾವಕಾಶ

IRCTC ನೇಮಕಾತಿ 2025: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ (IRCTC) ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ (Interested Candidates) ಇದು ಉತ್ತಮ ಅವಕಾಶ (Best Opportunity). ಈ ಹುದ್ದೆಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ಅರ್ಜಿ (Online Application) ಸಲ್ಲಿಸಬಹುದು. ಈ ನೇಮಕಾತಿಯ ಮೂಲಕ, ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ ಮತ್ತು ಇತರ ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡಲಾಗುತ್ತದೆ. ಈಗಾಗಲೇ ಅರ್ಜಿಗಳಿಗೆ ಆಹ್ವಾನ ನೀಡಲಾಗಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು IRCTC ಯ ಅಧಿಕೃತ ವೆಬ್‌ಸೈಟ್ irctc.com ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಮೂಲಕ, ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ ಮತ್ತು ಇತರ ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡಲಾಗುತ್ತಿದ್ದು, ಈ IRCTC ನೇಮಕಾತಿಗೆ ಅರ್ಜಿ ಸಲ್ಲಿಸಲು ಯೋಚಿಸುತ್ತಿರುವ ಯಾವುದೇ ಅಭ್ಯರ್ಥಿಯು ಏಪ್ರಿಲ್ 25 ರಂದು ಅಥವಾ ಅದಕ್ಕೂ ಮೊದಲು ಅರ್ಜಿ ಸಲ್ಲಿಸಬಹುದು. ನೀವು IRCTC ಯಲ್ಲಿ ಮ್ಯಾನೇಜರ್ ಹುದ್ದೆಯನ್ನು ಪಡೆಯುವ ಬಗ್ಗೆಯೂ ಯೋಚಿಸುತ್ತಿದ್ದರೆ, ಮೊದಲು ಕೆಳಗೆ ನೀಡಲಾದ ಮಾಹಿತಿಯನ್ನು ಎಚ್ಚರಿಕೆಯಿಂದ ಓದಿ.

ಶೈಕ್ಷಣಿಕ ಅರ್ಹತೆ

ಈ IRCTC ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ, ಬಿಎಸ್ಸಿ, ಬಿ.ಟೆಕ್ ಅಥವಾ ಬಿಇ (ಎಂಜಿನಿಯರಿಂಗ್) ಪದವಿಯನ್ನು ಹೊಂದಿರಬೇಕು.

ವಯಸ್ಸಿನ ಮಿತಿ

IRCTC ನೇಮಕಾತಿ 2025 ರ ಅಡಿಯಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯೋಚಿಸುತ್ತಿರುವ ಯಾವುದೇ ಅಭ್ಯರ್ಥಿಯು ಗರಿಷ್ಠ 55 ವರ್ಷ ವಯಸ್ಸಿನವರಾಗಿರಬೇಕು. ಅಲ್ಲದೆ, ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ಸಡಿಲಿಕೆ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ

ಈ IRCTC ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಅರ್ಹತೆ ಮತ್ತು ದಾಖಲೆ ಪರಿಶೀಲನೆಯ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ದಾಖಲೆ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಿ, ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅಧಿಸೂಚನೆ ಮತ್ತು ಅರ್ಜಿ ಲಿಂಕ್ ಇಲ್ಲಿ ನೋಡಿ

ನೀವು ರೈಲ್ವೆ ಅಥವಾ ಸರ್ಕಾರಿ ವಲಯದಲ್ಲಿ ನಿರ್ವಹಣಾ ಮತ್ತು ತಾಂತ್ರಿಕ ಹುದ್ದೆಗಳಲ್ಲಿ ವೃತ್ತಿಜೀವನವನ್ನು ನಿರ್ವಹಿಸಲು ಬಯಸಿದರೆ, ಇದು ನಿಮಗೆ ಒಂದು ಸುವರ್ಣಾವಕಾಶ. ನೀವು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. IRCTC ಅಧಿಕೃತ ವೆಬ್​ಸೈಟ್​​ನಲ್ಲಿ ಭೇಟಿ ಕೊಟ್ಟು ಪರಿಶೀಲನೆ ಮಾಡಬಹುದು.  ನೀವು ಇದಕ್ಕೆ ಆನ್​ಲೈನ್​ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಕಳುಹಿಸಲು ಮರೆಯಬೇಡಿ.

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೊನೆಯ ದಿನಾಂಕವನ್ನು ನೆನಪಿನಲ್ಲಿಡಬೇಕು. ಏಪ್ರಿಲ್​ 25ರ ಒಳಗೆ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡೆಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ IRCTC ಅಧಿಕೃತ ವೆಬ್​ಸೈಟ್​​ನಲ್ಲಿ ಭೇಟಿ ಕೊಟ್ಟು ಪರಿಶೀಲನೆ ಮಾಡಿ.

ಕನ್ನಡ ಸುದ್ದಿ/ ನ್ಯೂಸ್/Jobs/

IRCTC Recruitment 2025: IRCTC ಯಲ್ಲಿ ಉದ್ಯೋಗಾವಕಾಶ, 67000 ಸಂಬಳ! ಲಿಖಿತ ಪರೀಕ್ಷೆ ಇಲ್ಲದೇ ಸಿಗುತ್ತೆ ಮ್ಯಾನೇಜರ್ ಪೋಸ್ಟ್​!

[ad_2]
Source link

Leave a Comment