CA: 19ನೇ ವಯಸ್ಸಿನಲ್ಲಿಯೇ ಸಿಎ ಫೈನಲ್‌ ಪರೀಕ್ಷೆಯಲ್ಲಿ ಪಾಸ್! ವಿಶ್ವದ ಅತ್ಯಂತ ಕಿರಿಯ ಮಹಿಳಾ ಚಾರ್ಟರ್ಡ್ ಅಕೌಂಟೆಂಟ್ ಈ ಯುವತಿ | Nandini Agarwal Youngest CA in the World at 19

[ad_1]

Last Updated:

ಈ ಹುಡುಗಿ 19ನೇ ವಯಸ್ಸಿನಲ್ಲಿ CA ಫೈನಲ್‌ನಲ್ಲಿ ಒಂದನೇ ರ್ಯಾಂಕ್‌ ಪಡೆದಿದ್ದಾರೆ. ವಿಶ್ವದ ಅತ್ಯಂತ ಕಿರಿಯ ಮಹಿಳಾ ಚಾರ್ಟರ್ಡ್ ಅಕೌಂಟೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರಾಗಿದ್ದಾರೆ. 800ಕ್ಕೆ 614 ಅಂಕಗಳನ್ನು ಗಳಿಸಿ ಗಿನ್ನೆಸ್ ದಾಖಲೆ ಬರೆದಿದ್ದಾರೆ.

ನಂದಿನಿ ಅಗರವಾಲ್ನಂದಿನಿ ಅಗರವಾಲ್
ನಂದಿನಿ ಅಗರವಾಲ್

ಸಾಧನೆಗೂ, ವಯಸ್ಸಿಗೂ (Age) ಸಂಬಂಧವೇ ಇಲ್ಲ. ಕಿರಿಯರಿಂದ ಹಿರಿಯರವರೆಗೂ ಅವರದ್ದೇ ಆದ ಸಾಧನೆಯನ್ನು (Achievement) ವಯಸ್ಸಿನ ಲೆಕ್ಕವಿಲ್ಲದ ಮಾಡುತ್ತಾರೆ. ವಯಸ್ಸು ಸಣ್ಣದಾದರೂ ಜೆಇಇ (JEE), ನೀಟ್ (NEET), ಯುಪಿಎಸ್‌ಸಿ (UPSC), ಎಸ್‌ಎಸ್‌ಸಿ ಮತ್ತು ಸಿಎನಂತಹ ಸವಾಲಿನ ಪರೀಕ್ಷೆಗಳನ್ನು (Exam) ಬರೆದು ಪಾಸ್‌ ಮಾಡಿ ಅಧಿಕಾರದ ಗದ್ದುಗೆ ಹಿಡಿದಿರುವ ಹಲವು ಉದಾಹರಣೆಗಳಿವೆ. ಸಾಮಾನ್ಯವಾಗಿ ಜೆಇಇ, ನೀಟ್, ಯುಪಿಎಸ್‌ಸಿ, ಎಸ್‌ಎಸ್‌ಸಿ ಮತ್ತು ಸಿಎ ಪರೀಕ್ಷೆಗಳನ್ನು ಕಷ್ಟದ ಪರೀಕ್ಷೆ ಅಂತಾ ಪರಿಗಣಿಸಲಾಗುತ್ತದೆ. ಇದನ್ನು ಮೊದಲ ಪ್ರಯತ್ನದಲ್ಲಿಯೇ ಪಾಸ್‌ ಮಾಡೋದು ಕೂಡ ಕಷ್ಟ ಎನ್ನಲಾಗುತ್ತದೆ. ಆದರೆ ಕೆಲವು ವಿದ್ಯಾರ್ಥಿಗಳು ತಮ್ಮ ಮೊದಲ ಪ್ರಯತ್ನದಲ್ಲಿಯೇ ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವುದಲ್ಲದೇ, ಗಿನ್ನೆಸ್ ವಿಶ್ವ ದಾಖಲೆಯ ಪುಟದಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಾರೆ. ಇದೀಗ ನಾವು ವಿಶ್ವದ ಅತ್ಯಂತ ಕಿರಿಯ ಚಾರ್ಟರ್ಡ್ ಅಕೌಂಟೆಂಟ್ ಎಂಬ ಬಿರುದನ್ನು ಹೊಂದಿರುವ ಭಾರತೀಯ ಯುವತಿ ಯಾರು ಅಂತಾ ನೋಡೋಣ ಬನ್ನಿ.

ಸಿಎ ಫೈನಲ್ ಪರೀಕ್ಷೆಯಲ್ಲಿ ಈ ಯುವತಿಯದ್ದು ವಿಶ್ವ ದಾಖಲೆ

ಸಿಎ ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿಶ್ವದ ಅತ್ಯಂತ ಕಿರಿಯ ಮಹಿಳಾ ಚಾರ್ಟರ್ಡ್ ಅಕೌಂಟೆಂಟ್ ಎಂಬ ಹೆಗ್ಗಳಿಕೆ ಪಡೆದಿದ್ದು, ಬೇರೆ ಯಾರು ಅಲ್ಲ ನಂದಿನಿ ಅಗರವಾಲ್. ಮಧ್ಯಪ್ರದೇಶದ ಮೊರೆನಾದ ನಂದಿನಿ ಅಗರವಾಲ್, ಗಿನ್ನೆಸ್ ವಿಶ್ವ ದಾಖಲೆಯಿಂದ ಅಧಿಕೃತವಾಗಿ ಗುರುತಿಸಲ್ಪಟ್ಟ ವಿಶ್ವದ ಅತ್ಯಂತ ಕಿರಿಯ ಮಹಿಳಾ ಚಾರ್ಟರ್ಡ್ ಅಕೌಂಟೆಂಟ್ ಎಂಬ ಗರಿಮೆಯನ್ನು ಪಡೆದಿದ್ದಾರೆ.

ಮೊದಲಿನಿಂದಲೂ ಓದಿನಲ್ಲಿ ಚೂಟಿ ಇದ್ದ ನಂದಿನಿ, ಕೆಲ ಸಮಸ್ಯೆಯಿಂದಾಗಿ ಮಧ್ಯದಲ್ಲಿ ಓದಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವಳು 13ನೇ ವಯಸ್ಸಿನಲ್ಲಿ 10ನೇ ತರಗತಿ ಮತ್ತು 15ನೇ ವಯಸ್ಸಿನಲ್ಲಿ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶ ಪಡೆದಳು. ನಂತರ ಬಿ.ಕಾಮ್‌ ಆಧಾರದ ಮೇಲೆ ಚಾರ್ಟರ್ಡ್ ಅಕೌಂಟೆಂಟ್ ಅಭ್ಯಾಸ ಮಾಡಿ 19ನೇ ವಯಸ್ಸಿನಲ್ಲಿ CA ಫೈನಲ್‌ನಲ್ಲಿ AIR 1 ಮತ್ತು 16ನೇ ವಯಸ್ಸಿನಲ್ಲಿ CA ಇಂಟರ್‌ನಲ್ಲಿ AIR 31 ಪಡೆಯುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ಮಾಡಿದ್ದಾರೆ ನಂದಿನಿ ಅಗರವಾಲ್.

800ಕ್ಕೆ 614 ಮಾರ್ಕ್ಸ್‌ ಪಡೆದ ನಂದಿನಿ ಅಗರವಾಲ್

ಕೇವಲ 19 ವರ್ಷ ವಯಸ್ಸಿನಲ್ಲಿ, ನಂದಿನಿ ಅಗರವಾಲ್ 2021ರಲ್ಲಿ CA ಫೈನಲ್ ಪರೀಕ್ಷೆಯಲ್ಲಿ ಅಖಿಲ ಭಾರತ ರ್ಯಾಂಕ್ (AIR) 1 ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದರು. 800 ರಲ್ಲಿ 614 ಅಂಕಗಳನ್ನು ಗಳಿಸಿ 76.75% ಪಡೆದ ಇವರು ಹೊಸ ಸಾಧನೆಗೆ ಮುನ್ನುಡಿ ಬರೆದರು.

ಈ ರಿಸಲ್ಟ್‌ ಹೊರಬಿದ್ದಾಗ ಅವರಿಗೆ ಸರಿಯಾಗಿ 19 ವರ್ಷ ಮತ್ತು 330 ದಿನಗಳಾಗಿತ್ತು. ಈ ಮೂಲಕ ಗಿನ್ನೆಸ್ ವಿಶ್ವ ದಾಖಲೆಗಳಿಂದ ಗುರುತಿಸಲ್ಪಟ್ಟ ವಿಶ್ವದ ಅತ್ಯಂತ ಕಿರಿಯ ಮಹಿಳಾ ಚಾರ್ಟರ್ಡ್ ಅಕೌಂಟೆಂಟ್ ಎಂಬ ಪ್ರತಿಷ್ಠಿತ ಸ್ಥಾನಮಾನವನ್ನು ಈಕೆ ಗಳಿಸಿದಳು.

ಸುಲಭವಾಗಿರಲಿಲ್ಲ ವೃತ್ತಿ ಜೀವನ

ನಂದಿನಿ ಅವರು ಪರೀಕ್ಷೆಯ ನಂತರ PwC ಕಂಪನಿಯ ಜೊತೆ ತಮ್ಮ ಕಾರ್ಪೊರೇಟ್ ಪ್ರಯಾಣವನ್ನು ಪ್ರಾರಂಭಿಸಿದರು. ನಂತರ IFRS ನಿಯೋಜನೆಗಳು, ತೆರಿಗೆ ಲೆಕ್ಕಪರಿಶೋಧನೆಗಳು ಮತ್ತು ಫೋರೆನ್ಸಿಕ್ ಲೆಕ್ಕಪರಿಶೋಧನೆಗಳಲ್ಲಿ ಇವರು ಮೂರು ವರ್ಷಗಳ ಕೆಲಸ ಮಾಡಿ ಅನುಭವ ಹೊಂದಿದ್ದಾರೆ ಎಂಬ ಮಾಹಿತಿಯನ್ನು ಅವರ ಲಿಂಕ್ಡ್‌ಇನ್ ಬಯೋದಲ್ಲಿ ನೋಡಬಹುದಾಗಿದೆ.

ಕೆಲಸ ಸಿಕ್ಕ ಮೇಲೆನೂ ಅವರ ಪ್ರಯಾಣ ಸುಲಭವಾಗಿರಲಿಲ್ಲ. ಕೇವಲ 16 ವರ್ಷ ವಯಸ್ಸಿನಲ್ಲಿ, ಅವರ ಚಿಕ್ಕ ವಯಸ್ಸಿನ ಕಾರಣದಿಂದಾಗಿ ಅನೇಕ ಕಂಪನಿಗಳು ಅವರನ್ನು ಅಪ್ರೆಂಟಿಸ್ ಆಗಿ ಸ್ವೀಕರಿಸಲು ಹಿಂದೇಟು ಹಾಕಿದವು. ಆದರೆ ಛಲ ಬಿಡದ ಈಕೆ ದೃಢನಿಶ್ಚಯದ ಮೂಲಕ ಈ ಎಲ್ಲಾ ಸವಾಲುಗಳನ್ನು ದಾಟಿ ಅವರ ಕನಸನ್ನು ನನಸಾಗಿಸಿಕೊಂಡರು.

[ad_2]
Source link

Leave a Comment