[ad_1]
ಅಸ್ಸಾಂ ರಾಜ್ಯದ ಗೋಲ್‌ಪಾರಾ ಪ್ರದೇಶ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ವ್ಯಾಪಾರವನ್ನು ಮಟ್ಟಹಾಕಲು ಪ್ರಯತ್ನಿಸುತ್ತಿರುವ ಅಸ್ಸಾಂ ಪೊಲೀಸರು ಕಾರ್ಯಚರಣೆಯ ಭಾಗವಾಗಿ ಬಿಘಾಸ್ ಗಸಗಸೆ (ಗಾಂಜಾ) ಗಿಡಗಳನ್ನು ಟ್ರಾಕ್ಟರ್ ಸಹಾಯದಿಂದ ನಾಶ ಮಾಡಲಾಗಿದೆ.
ಡ್ರಗ್ ಡೀಲರ್‌ಗಳನ್ನು ಉದ್ದೇಶಿಸಿ, ಮುಂದಿನ ಬಾರಿ ನೀವು ಡ್ರಗ್ಸ್ ಬಗ್ಗೆ ಯೋಚಿಸಿ
ಇದನ್ನು ಸ್ವತಃ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಸಾಮಾಜಿಕ ಜಾಲತಾಣದ ಎಕ್ಸ್ ಖಾತೆಯಲ್ಲಿ ಫೋಸ್ಟ್, “ಯೋಜಿತ ಉಡ್ತಾ ಅಸ್ಸಾಂ ಪಕ್ಷ”ದ ಅಂತ್ಯವನ್ನು ಸೂಚಿಸುವ ವಿಧ್ವಂಸಕ ಕಾರ್ಯಾಚರಣೆಯನ್ನು ಚಾರ್ ಪ್ರದೇಶಗಳಲ್ಲಿ ನಡೆಸಲಾಯಿತು ಎಂದು ತಿಳಿಸಿದ್ದಾರೆ. ಇದರೊಂದಿಗೆ ಡ್ರಗ್ ಡೀಲರ್‌ಗಳನ್ನು ಉದ್ದೇಶಿಸಿ, ಮುಂದಿನ ಬಾರಿ ನೀವು ಡ್ರಗ್ಸ್ ಬಗ್ಗೆ ಯೋಚಿಸಿದರೆ, ಅದಕ್ಕೂ ಮೊದಲು ಅಸ್ಸಾಂ ಪೊಲೀಸರ ಬಗ್ಗೆ ಯೋಚಿಸಿ ಎನ್ನುವ ಸಂದೇಶ ರವಾನಿಸಿದ್ದಾರೆ.
ಯಾರು ಈ ಪ್ಯಾಬ್ಲೋ ಎಸ್ಕೋಬಾರ್..?
1970 ರ ದಶಕದಲ್ಲಿ ಕೊಲಂಬಿಯಾದಲ್ಲಿ ಡ್ರಗ್ ಲಾರ್ಡ್ ಆಗಿದ್ದ ಈ ಪ್ಯಾಬ್ಲೋ ಎಸ್ಕೋಬಾರ್ ತನ್ನ ದೇಶದ ಪ್ರಜಾಪ್ರಭುತ್ವ ಸರ್ಕಾರವನ್ನು ಅಸ್ಥಿರಗೊಳಿಸಿ, ಇಡೀ ದಕ್ಷೀಣ ಅಮೆರಿಕ ಖಂಡದಾದ್ಯಂತ ಅಕ್ರಮ ಅಕ್ರಮ ಮಾದಕವಸ್ತು ವ್ಯಾಪಾರವನ್ನು ಸೃಷ್ಠಿಸಿದ್ದ. ಇದರೊಂದಿಗೆ ತನ್ನ ಹಸಿಂಡಾ ನೆಪೋಲ್ಸ್ ಎಸ್ಟೇಟ್‌ನಲ್ಲಿ ಆನೆ, ಆಸ್ಟ್ರಿಚ್ ಮತ್ತು ಹಿಪ್ಪೋಗಳು ಸೇರಿದಂತೆ ಅನೇಕ ಪ್ರಾಣಿಗಳನ್ನು ಸಾಕಿ, ತನ್ನದೇ ಆದಂತಹ ಖಾಸಗಿ ಮೃಗಾಲಯವನ್ನು ಸೃಷ್ಠಿ ಮಾಡಿಕೊಂಡಿದ್ದ, ಇವನ ಅರಮನೆಯನ್ನು ‘ಕೊಕೇನ್ ಹಿಪ್ಪೋಸ್’ ಎಂದೇ ಕರೆಯಲಾಗುತ್ತಿತ್ತು. ಇನ್ನು ಇವನು ಇಡೀ ಖಂಡದಾದ್ಯಂತ ತನ್ನ ಮಾದಕ ಸಾಮ್ರಾಜ್ಯವನ್ನು ಸೃಷ್ಠಿಸಿಕೊಂಡಿದ್ದರ ಪರಿಣಾಮವಾಗಿ ಇವನನ್ನು ಮಟ್ಟಹಾಕಲು ಹಲವು ರಾಷ್ಟ್ರಗಳು ಅನೇಕ ವರ್ಷಗಳ ಕಾಲ ಅಂದರೆ ಅಂದಾಜು ಮೂರು ದಶಕಗಳ ಸಂದರ್ಭ ಪ್ರಯತ್ನ ಪಟ್ಟು ಸಫಲವಾದವು. ಈ ಸಮಯದಲ್ಲಿ ಹಲಾವಾರು ರಾಷ್ಟ್ರಗಳ ಪ್ರಮುಖರು ಸೇರಿದಂತೆ ಅನೇಕ ರಾಜಾಕಾರಣಿಗಳನನ್ನು ಹತ್ಯ ಮಾಡಲಾಗಿತ್ತು. ಇದರಿಂದಲೇ ಅನೇಕ ದೇಶಗಳಲ್ಲಿ ಡ್ರಗ್ಸ್ ಡೀಲರ್‌ಗಳನ್ನು ಈ ಪ್ಯಾಬ್ಲೋ ಎಸ್ಕೋಬಾರ್ಗೆ ಹೋಲಿಕೆ ಮಾಡಿ ಮಟ್ಟ ಹಾಕುತ್ತೇವೆ ಎನ್ನುತ್ತಾರೆ.
ಅಕ್ರಮ ನುಸುಳುಕೋರರ ನಿಯಂತ್ರಿಸುವುದನ್ನ ನಾವು ಇಸ್ರೇಲ್ ನೋಡಿ ಕಲಿಯಬೇಕು- ಅಸ್ಸಾಂ ಸಿಎಂ ಹಿಮಂತ್
ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮಾ ಅವರು, ಎದುರಾಳಿಗಳಿಂದ ಸುತ್ತುವರಿದಿದ್ದರೂ ಬದುಕುಳಿಯುವ ಬಗ್ಗೆ ಅಸ್ಸಾಂ (Assam) ರಾಜ್ಯವು ಇಸ್ರೇಲ್ (Israel) ದೇಶದಿಂದ ಪಾಠಗಳನ್ನು ಕಲಿಯಬೇಕಾಗಿದೆ ಎಂದರು. ಸೋನಿತ್‌ಪುರ ಜಿಲ್ಲೆಯ ಜಮುಗುರಿಹತ್‌ನಲ್ಲಿ ನೆಡದ ‘ಸ್ವಾಹಿದ್ ದಿವಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಶರ್ಮಾ ಅವರು, ಅಸ್ಸಾಂನ ಗಡಿಗಳು ಎಂದಿಗೂ ಸುರಕ್ಷಿತವಾಗಿಲ್ಲ. “ಐತಿಹಾಸಿಕವಾಗಿ, ನಾವು ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಪಶ್ಚಿಮ ಬಂಗಾಳದೊಂದಿಗೆ ಗಡಿಗಳನ್ನು ಹಂಚಿಕೊಂಡಿದ್ದೇವೆ. ಆದರೆ ನಾವು (ಅಸ್ಸಾಮಿ ಜನರು) 12 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರಾಗಿದ್ದೇವೆ ಎಂದು ಅವರು ಹೇಳಿದರು.
ಇಸ್ರೇಲ್ ದೇಶದ ಇತಿಹಾಸದಿಂದ ಕಲಿಯಬೇಕಾಗಿದೆ
“ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು, ಅದಮ್ಯ ಧೈರ್ಯದೊಂದಿಗೆ, ಶತ್ರುಗಳಿಂದಲೇ ಸುತ್ತುವರೆದಿದ್ದರೂ ಇಸ್ರೇಲ್ ದೇಶವು ಹೇಗೆ ಪ್ರಬಲವಾಯಿತು ಎಂಬುದನ್ನು ನಾವು ದೇಶದ ಇತಿಹಾಸದಿಂದ ಕಲಿಯಬೇಕಾಗಿದೆ. ಆಗ ಮಾತ್ರ ನಮ್ಮ ‘ಜಾತಿ’ (ಸಮುದಾಯ) ಉಳಿಯಬಹುದು,” ಎಂದು ಅವರು ಹೇಳಿದರು.
Guwahati [Gauhati],Kamrup Metropolitan,Assam
February 02, 2025 3:39 PM IST
Assam: ‘ಉಡ್ತಾ ಅಸ್ಸಾಂ’ ಹಾಳು ಮಾಡಿದ್ದಕ್ಕೆ ಕ್ಷಮಿಸಿ ಎನ್ನುತ್ತಲೇ 27 ಕೋಟಿ ಮೌಲ್ಯದ ಗಾಂಜಾ ಗಿಡ ನಾಶ! ಮಾದಕ ವಸ್ತುಗಳ ವಿರುದ್ಧ ಹಿಮಂತ್ ಬಿಸ್ವಾಸ್ ಶರ್ಮಾ ಸಮರ
Source link