[ad_1]
ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ನೀವು ಬಯಸಿದರೆ ಅಧಿಕೃತ ವೆಬ್‌ಸೈಟ್ apdsc.apcfss.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 15. ಈ ಶಿಕ್ಷಕರ ನೇಮಕಾತಿಗೆ ಪರೀಕ್ಷೆಯ ಸಂಭವನೀಯ ದಿನಾಂಕ ಜೂನ್ 6 ಮತ್ತು ಜುಲೈ 6 ಆಗಿದೆ.
ಉದ್ಯೋಗದ ಸ್ಥಳಾವಕಾಶಗಳು
ಅಧಿಸೂಚನೆಯ ಪ್ರಕಾರ, ಇದರ ಅಡಿಯಲ್ಲಿ, ಟಿಜಿಟಿ, ಪಿಜಿಟಿ, ಎಸ್‌ಜಿಟಿ, ಪಿಆರ್‌ಟಿ ಮತ್ತು ಇತರ ಶಿಕ್ಷಕರ ನೇಮಕಾತಿ ನಡೆಯಲಿದೆ. 16347 ಖಾಲಿ ಹುದ್ದೆಗಳಲ್ಲಿ 6,371 ಸೆಕೆಂಡರಿ ಗ್ರೇಡ್ ಟೀಚರ್ (ಎಸ್‌ಜಿಟಿ), 7,725 ಶಾಲಾ ಸಹಾಯಕರು, 1,781 ಟಿಜಿಟಿಗಳು ಮತ್ತು 286, 52 ಪ್ರಾಂಶುಪಾಲರು, 132 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳಿವೆ.
ಯಾರು ಅರ್ಜಿ ಸಲ್ಲಿಸಬಹುದು?
ಆಂಧ್ರಪ್ರದೇಶ ಜಿಲ್ಲಾ ಆಯ್ಕೆ ಸಮಿತಿ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಆಂಧ್ರಪ್ರದೇಶ ಟಿಇಟಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯಲ್ಲಿ ಟಿಆರ್‌ಟಿಗೆ 80% ತೂಕ ಮತ್ತು ಟಿಇಟಿ ಅಂಕಗಳಿಗೆ 20% ತೂಕವಿರುತ್ತದೆ. ನಂತರ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ಇರುತ್ತದೆ.
ಶಿಕ್ಷಕರ ನೇಮಕಾತಿ ವೇಳೆ ನಿಮ್ಮ ಶಿಕ್ಷಣದ ದಾಖಲೆ ಮತ್ತು ಅನುಭವಗಳನ್ನು ಕೂಡ ಲೆಕ್ಕಾ ಹಾಕಲಾಗುತ್ತದೆ. ಆಂಧ್ರಪ್ರದೇಶ ಜಿಲ್ಲಾ ಆಯ್ಕೆ ಸಮಿತಿ ಹೊರಡಿಸಿದ ಅಧಿಸೂಚನೆ ಪ್ರಕಾರ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮೇ 5 ರೊಳಗೆ ಅಥವಾ ಮೇ5 ರಷ್ಟರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನೂ ಹಚ್ಚಿನ ವಿವರಗಳು ಬೇಕಿದ್ದರೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸಬಹುದು.
ಇದನ್ನೂ ಓದಿ: ChatGPT ಕಂಪನಿ OpenAI ನಲ್ಲಿ ಉತ್ತಮ ಉದ್ಯೋಗಗಳು; ಈ ಕೌಶಲ್ಯ ನಿಮಗಿದ್ರೆ ಪಕ್ಕಾ ಕೆಲಸ!
ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ apdsc.apcfss.in ಗೆ ಭೇಟಿ ನೀಡುವ ಮೂಲಕ ಪರಿಶೀಲಿಸಬಹುದು. ನೀವು ಈ ಮೇಲಿನ ಅರ್ಹತೆ ಹೊಂದಿದ್ರೆ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
April 24, 2025 1:42 PM IST
Source link