[ad_1]
ಮಿಂಕುರಿ ರಿಧಿಮಾ ರೆಡ್ಡಿ ಯಾರು?
ರಿಧಿಮಾ ಮೂಲತಃ ಹೈದರಾಬಾದ್ನವರಾಗಿದ್ದು, ಅಲ್ಲಿ ಅವರು ತಮ್ಮ 10 ನೇ ತರಗತಿಯನ್ನು ನಗರದಲ್ಲಿಯೇ ಪೂರ್ಣಗೊಳಿಸಿದರು. ನಂತರ ಅವರು ತಮ್ಮ 11 ಮತ್ತು 12 ನೇ ತರಗತಿಗಳಿಗೆ ಜಾನ್ಸನ್ ಗ್ರಾಮರ್ ಶಾಲೆಗೆ ತೆರಳಿದರು. ಅವರ ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಅವರು 2023 ರಲ್ಲಿ ಐಐಟಿ ಮದ್ರಾಸ್ಗೆ ಸೇರಿದರು ಮತ್ತು ಪ್ರಸ್ತುತ ಎರಡನೇ ವರ್ಷದಲ್ಲಿದ್ದಾರೆ.
ಅವರು ಜೆನೆಟಿಕ್ ಎಂಜಿನಿಯರಿಂಗ್ ಆಧಾರಿತ ಯೋಜನೆಗಳಲ್ಲಿ ಕೆಲಸ ಮಾಡುವ ಮತ್ತು ಗ್ರ್ಯಾಂಡ್ ಜೆ ನಲ್ಲಿ ಅವುಗಳನ್ನು ಪ್ರಸ್ತುತಪಡಿಸುವ ಐಐಟಿ ಮದ್ರಾಸ್ನಲ್ಲಿರುವ ಐಜಿಇಎಂ (ಇಂಟರ್ನ್ಯಾಷನಲ್ ಜೆನೆಟಿಕಲಿ ಇಂಜಿನಿಯರಿಂಗ್ ಮೆಷಿನ್) ತಂಡದ ಭಾಗವಾಗಿದ್ದಾರೆ.
2023 ರಲ್ಲಿ ಜೆಇಇ ಮೇನ್ಸ್, ಜೆಇಇ ಅಡ್ವಾನ್ಸ್ಡ್, ನೀಟ್ ಯುಜಿ, ಬಿಟ್ಸಾಟ್, ಮತ್ತು ವಿಐಟಿಇಇ ಮುಂತಾದ ವಿವಿಧ ಪ್ರವೇಶ ಪರೀಕ್ಷೆಗಳಿಗೆ ಹಾಜರಾದ ರಿಧಿಮಾ, ಮಿಂಕುರಿಯ ಐಐಟಿ ಮತ್ತು ನೀಟ್ ಅಂಕಗಳನ್ನು ಗಳಿಸಿದರು.
ಅವರು ಜೆಇಇ ಮೇನ್ಸ್ನಲ್ಲಿ 99 ಪರ್ಸೆಂಟೈಲ್ ಮತ್ತು ನೀಟ್ ಯುಜಿಯಲ್ಲಿ ಸುಮಾರು 150 ಅಂಕಗಳನ್ನು ಗಳಿಸಿದರು. ಅವರ ಜೆಇಇ ಅಡ್ವಾನ್ಸ್ಡ್ ರ್ಯಾಂಕ್ ಸುಮಾರು 10,000 ಆಗಿತ್ತು.
ಆದಾಗ್ಯೂ, ಅವರು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಇದೆರಡರಲ್ಲಿ ಯಾವ ವಿಷಯವನ್ನು ಆರಿಸಿಕೊಳ್ಳಲಿ ಎಂಬ ಇಬ್ಬಂದಿಗೆ ಸಿಲುಕಿದರು.
ಈ ಎರಡು ಕ್ಷೇತ್ರಗಳ ಬಗ್ಗೆ ಸಮಾನ ಆಸಕ್ತಿ ಹೊಂದಿದ್ದ ರಿಧಿಮಾ ಯಾವುದನ್ನು ಆಯ್ದುಕೊಳ್ಳಬೇಕೆಂಬ ಗೊಂದಲಕ್ಕೊಳಕಾದರು ಹಾಗೂ ತಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡರು.
ಐಐಟಿ ಮದ್ರಾಸ್ನಲ್ಲಿ ಎರಡೂ ಕ್ಷೇತ್ರಗಳ ಆಯ್ಕೆ
ತನ್ನ ಎರಡೂ ಆಸಕ್ತಿಗಳನ್ನು ಸಂಯೋಜಿಸಬಹುದಾದ ಆಯ್ಕೆಗಳ ಹುಡುಕಾಟದ ಸಮಯದಲ್ಲಿ, ರಿಧಿಮಾ ಐಐಟಿ ಮದ್ರಾಸ್ನಲ್ಲಿ ವೈದ್ಯಕೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗವನ್ನು ಕಂಡುಕೊಂಡರು.
ಈ ಕಾರ್ಯಕ್ರಮವು ಅವರಿಗೆ ಎರಡೂ ಕ್ಷೇತ್ರಗಳ ಪರಿಪೂರ್ಣ ಸಂಯೋಜನೆಯನ್ನು ನೀಡಿತು ಮತ್ತು ಅವರು IISER ಆಪ್ಟಿಟ್ಯೂಡ್ ಪರೀಕ್ಷೆ (IAT) ಬರೆಯಲು ನಿರ್ಧರಿಸಿದರು. ಅವರು ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡಿದರು ಮತ್ತು ಐಐಟಿ ಮದ್ರಾಸ್ಗೆ ಪ್ರವೇಶ ಪಡೆದರು.
ರಿಧಿಮಾ ರೆಡ್ಡಿ ತಯಾರಿ ಹೇಗಿತ್ತು?
ಮಿಂಕುರಿ ರಿಧಿಮಾ ರೆಡ್ಡಿ ಅವರ ಸಿದ್ಧತೆಯ ಬಗ್ಗೆ ರಿಧಿಮಾ ಅವರು JEE ಅಡ್ವಾನ್ಸ್ಡ್ ಮತ್ತು NEET UG ಗೆ ಈಗಾಗಲೇ ತಯಾರಿ ನಡೆಸುತ್ತಿದ್ದ ಕಾರಣ, IAT ಪರೀಕ್ಷೆಗೆ ನಿರ್ದಿಷ್ಟವಾಗಿ ತಯಾರಿ ನಡೆಸಲಿಲ್ಲ.
ಆದಾಗ್ಯೂ, ಇತರ ಪರೀಕ್ಷೆಗಳಿಗೆ ಹೋಲಿಸಿದರೆ IAT ತಯಾರಿಗೆ ಲಭ್ಯವಿರುವ ಸಂಪನ್ಮೂಲಗಳ ಕೊರತೆಯಿದೆ ಎಂದು ಅವರು ನಂಬುತ್ತಾರೆ.
ಇದರ ಹೊರತಾಗಿಯೂ, ಅವರು ಉತ್ತಮ ಪ್ರದರ್ಶನ ನೀಡಿ IIT ಮದ್ರಾಸ್ನಲ್ಲಿ ವೈದ್ಯಕೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಸೀಟು ಪಡೆದರು.
ಐಐಟಿಯಲ್ಲಿರುವುದರ ಬಗ್ಗೆ ಮಿಂಕುರಿ ರಿಧಿಮಾ ರೆಡ್ಡಿ ಅವರಿಗೆ ಹೇಗನಿಸುತ್ತದೆ ಎಂಬುದರ ಬಗ್ಗೆ ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಐಐಟಿಯಲ್ಲಿರುವುದರಿಂದ ಜನರೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿ ಸಂವಹನ ನಡೆಸಲು ಮತ್ತು ಸಹಕರಿಸಲು ನನಗೆ ಕಲಿಸಿದೆ.
ಕ್ಲಬ್ಗಳು, ತಾಂತ್ರಿಕ ತಂಡಗಳಲ್ಲಿ ಭಾಗವಹಿಸುವ ಮೂಲಕ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ನಾನು ಹೆಚ್ಚು ಸಾಮಾಜಿಕ, ಆತ್ಮವಿಶ್ವಾಸ ಮತ್ತು ನನ್ನ ಸೌಕರ್ಯ ವಲಯದಿಂದ ಹೊರಬರುವಲ್ಲಿ ನಿರಾಳವಾಗಿದ್ದೇನೆ ಎಂದು ಹೇಳಿದರು.
ಇದು ಪ್ರತಿಭಾವಂತರಿಗೆ ಒಂದೊಳ್ಳೆಯ ವೇದಿಕೆಯಾಗಿದೆ ಹಾಗೂ ಎರಡು ವಿಭಾಗಗಳಲ್ಲಿ ಆಸಕ್ತಿ ಹೊಂದಿರುವವರು ಮುಂದೇನು ಮಾಡಬೇಕೆಂದು ಮಾರ್ಗದರ್ಶನ ನೀಡುತ್ತದೆ ಎಂದು ರಿಧಿಮಾ ತಿಳಿಸಿದ್ದಾರೆ.
April 30, 2025 3:11 PM IST
Source link