[ad_1]
ನೆಲದ ಶ್ರೀಮಂತ ಪರಂಪರೆಗೆ ಒಂದು ಗೌರವ
ಈ ಪ್ರತಿಯೊಂದು ಉತ್ಸವ ಕೂಡ ನಮ್ಮ ನೆಲದ ಶ್ರೀಮಂತ ಪರಂಪರೆಗೆ ಸಾಮರಸ್ಯದ ಗೌರವವನ್ನೊದಗಿಸುತ್ತದೆ. ಪೂಜ್ಯ ದೇವತೆಗಳು, ಪವಿತ್ರ ದೇವಾಲಯಗಳು, ಪೌರಾಣಿಕ ಸಂಗೀತ ಸಂತರು ಮತ್ತು ಹಿಂದೂ ಸಂಪ್ರದಾಯಗಳ ದೈವಿಕ ಸಾರದಿಂದ ಹೆಸರಿಸಲಾದ ಈ ಉತ್ಸವಗಳು ಕೇವಲ ಕಾರ್ಯಕ್ರಮಗಳಲ್ಲ; ಇವು ನಮ್ಮ ಸಾಮೂಹಿಕ ಚೈತನ್ಯದ ಸಂತೋಷದಾಯಕ ಆಚರಣೆಗಳಾಗಿವೆ.
ಭಾರತ್ ಗಂಧರ್ವ ಯಾತ್ರೆಯ 16 ನೇ ಆವೃತ್ತಿ
ಇದೀಗ ದೇಶದ ರಾಷ್ಟ್ರೀಯ ಸಂಗೀತ ವೈಭವವನ್ನು ವಿಜೃಂಭಣೆಯಿಂದ ಆಚರಿಸುವ ಹಾಗೂ ಸಂಗೀತ ಉತ್ಸವವೆಂದೇ ಕರೆಯಿಸಿಕೊಂಡಿರುವ ಭಾರತೀಯ ಸಾಮಗಾನ ಸಭಾ ಆಯೋಜಿಸಿರುವ ಭಾರತ್ ಗಂಧರ್ವ ಯಾತ್ರೆಯ 16 ನೇ ಆವೃತ್ತಿಯು ಇದೇ ಫೆಬ್ರವರಿ 19 ರಿಂದ 23 ರವರೆಗೆ ಬೆಂಗಳೂರಿನ ವೈಯಾಲಿಕಾವಲ್ನಲ್ಲಿರುವ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದೆ.
ಸಂಗೀತ ಆಸಕ್ತರು ಹಾಗೂ ಕಲಾರಸಿಕರಿಗೆ ಈ ಉತ್ಸವ ಸ್ಮರಣೀಯ ಆಚರಣೆಯಾಗಿದ್ದು, ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಾಮುಖ್ಯತೆಯ ಬಗ್ಗೆ ಪರಿಚಯಿಸುತ್ತದೆ. ಹಾಗೂ ಈ ಕಾರ್ಯಕ್ರಮವು ಸಂಗೀತ, ಕಲಾ ಕ್ಷೇತ್ರದ ಅಪ್ರತಿಮ ಕಲಾವಿದರು ಮತ್ತು ಗಣ್ಯರನ್ನೊಳಗೊಂಡಿದ್ದು, ಅವರ ಅಪ್ರತಿಮ ಪ್ರದರ್ಶನಗಳನ್ನು ಆಸ್ವಾದಿಸುವ ಭಾಗ್ಯವನ್ನೊದಗಿಸಲಿದೆ.
ಅಪ್ರತಿಮ ಕಲಾವಿದರ ಸಂಗೀತ ಕಾರ್ಯಕ್ರಮಗಳು
ಪ್ರಮುಖ ಭಾರತೀಯ ಶಾಸ್ತ್ರೀಯ ಸಂಗೀತಗಾರರಾಗಿರುವ ರಂಜನಿ–ಗಾಯತ್ರಿ, ಸಂದೀಪ್ ನಾರಾಯಣ್ ಸೇರಿದಂತೆ, ತ್ರಿಶೂರ್ ಬ್ರದರ್ಸ್, ಸಾಯಿ ವಿಘ್ನೇಶ್, ಆರ್ಯ ಅಂಬೇಕರ್, ಸೂರ್ಯಗಾಯತ್ರಿ, ಲಕ್ಷ್ಮಿ ನಾಗರಾಜ್, ಇಂದು ನಾಗರಾಜ್, ಸುಮಂತ್ ಮಂಜುನಾಥ್, ಶಾದಾಜ್ ಗೋಡ್ಖಿಂಡಿ, ಗಂಗಾ ಶಶಿಧರನ್ ಮತ್ತು ಆರ್ಯ ಬಾನಿಕ್ ಮೊದಲಾದ ಸಂಗೀತ ದಿಗ್ಗಜರು ಈ ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಕಾರ್ಯಕ್ರಮಗಳ ಮೂಲಕ ಕಲಾರಸಿಕರನ್ನು ರಂಜಿಸಲಿದ್ದಾರೆ.
ಭಾರತ್ ಗಂಧರ್ವ ಯಾತ್ರೆ! 10 ಆಕರ್ಷಕ ಸಂಗೀತ ಕಚೇರಿಗಳು ಮತ್ತು 12 ವಿಶಿಷ್ಟ ಥೀಮ್ಗಳೊಂದಿಗೆ ಸಂಗೀತದ ಮೋಡಿಮಾಡುವ ಜಗತ್ತಿನಲ್ಲಿ ನಮ್ಮನ್ನು ನಾವು ತಲ್ಲೀನರನ್ನಾಗಿಸುವ ಅತ್ಯಂತ ಮೋಹಕ ಕಾರ್ಯಕ್ರಮವಾಗಿದ್ದು, ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವು ಅತ್ಯಂತ ಆಕರ್ಷಣೀಯ ಎಂದೆನ್ನಿಸಲಿದೆ.
ಒಂದೊಂದು ದಿನವೂ ಸ್ವರ ಮಾಧುರ್ಯ, ಸಂಗೀತ ಸುಧೆಯ ವರ್ಷಧಾರೆಯೇ ನಡೆಯಲಿದ್ದು, ಪ್ರತಿಯೊಂದು ಕಲಾವಿದರೂ ತಮ್ಮ ಪ್ರತಿಭೆಯ ಮಾಧುರ್ಯವನ್ನು ಉಣಬಡಿಸಲಿದ್ದಾರೆ.
ಕೊಳಲುವಾದಕ ಶಶಾಂಕ್ ಸುಬ್ರಹ್ಮಣ್ಯಂ ಅವರಿಗೆ ಸಾಮಗಾನ ಮಾತಂಗ ಪ್ರಶಸ್ತಿ
ಸಂಗೀತ ಪ್ರದರ್ಶನಗಳ ಜೊತೆಜೊತೆಗೆ, ಭಾರತೀಯ ಶಾಸ್ತ್ರೀಯ ಸಂಗೀತ ಜಗತ್ತಿಗೆ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ, ಫೆಬ್ರವರಿ 23 ರಂದು ಪ್ರಸಿದ್ಧ ಕೊಳಲುವಾದಕ ಶಶಾಂಕ್ ಸುಬ್ರಹ್ಮಣ್ಯಂ ಅವರಿಗೆ 13 ನೇ ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿಯನ್ನು ಇದೇ ಸಮಾರಂಭದಲ್ಲಿ ನೀಡಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶಶಾಂಕ್ ಸುಬ್ರಹ್ಮಣ್ಯಂ ಅವರು ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿಯಾದ ನಿವೃತ್ತ ಐಎಎಸ್ ಅಧಿಕಾರಿ SV ರಂಗನಾಥ್ IAS ಹಾಗೂ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ್ ವಿ ಬೆಟ್ಟಕೋಟೆ ಮತ್ತು ಭಾರತೀಯ ವಿದ್ಯಾ ಭವನದ ನಿರ್ದೇಶಕ HN ಸುರೇಶ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಗಂಧರ್ವ ಸಂಗೀತ ಎಂದರೇನು?
ದೇವಾಧಿದೇವತೆಗಳಿಂದ ಪಾಲಿಸಲಾದ ಸಂಗೀತ ಸಂಪ್ರದಾಯವೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಗಂಧರ್ವ ಸಂಗೀತವು, ಧ್ವನಿ, ಭಾಷೆ ಮತ್ತು ಲಯದ ಸೌಂದರ್ಯವನ್ನು ಸಾಮರಸ್ಯದಿಂದ ಸಂಯೋಜಿಸುತ್ತದೆ. ಇನ್ನು ಗಂಧರ್ವ ಸಂಗೀತ ಎಂಬುದು ಕೇವಲ ಸ್ವರಗಳ ಸಂಗ್ರಹಕ್ಕಿಂತ ಹೆಚ್ಚಿನದ್ದಾಗಿದ್ದು, ಇದು ಸಮಯ, ಸೃಜನಶೀಲತೆ ಮತ್ತು ಸಮರ್ಪಣೆಯ ಎಳೆಗಳಿಂದ ನೇಯ್ದ ಒಂದು ರೋಮಾಂಚಕ ಸಂಗೀತವಾಗಿದೆ.
Bangalore,Karnataka
February 17, 2025 4:33 PM IST
Bharat Gandharva Yatra: ಸಂಗೀತಾಸಕ್ತರಿಗೆ ಆದರದ ಕರೆಯೋಲೆ; ಬೆಂಗಳೂರಿನಲ್ಲಿ ಭಾರತ್ ಗಂಧರ್ವ ಯಾತ್ರೆಯ 16ನೇ ಆವೃತ್ತಿ! ಎಲ್ಲಿ, ಯಾವಾಗ ಗೊತ್ತಾ?
Source link