[ad_1]
Last Updated:
ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಅಥವಾ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ 18 ರಿಂದ 30 ವರ್ಷ ವಯೋಮಿತಿಯ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದು.
ಚಿಕ್ಕಮಗಳೂರು: ಡಿಗ್ರಿ ಮುಗೀತು, ಪಿಯು ಮುಗಿತು, ಓದಿದ್ದೆಲ್ಲಾ ಆಯ್ತು ಎಲ್ಲೂ ಕೆಲ್ಸ ಸಿಗ್ತಾ ಇಲ್ಲ ಅನ್ನೋರು ಈ ಸ್ಟೋರಿ ಓದಿ. ನಾಳೆ ಚಿಕ್ಕಮಗಳೂರಲ್ಲಿ(Chikkamagaluru) ನೇರ ಸಂದರ್ಶನವನ್ನ(Walk-in-Interview) ಆಯೋಜಿಸಿದ್ದಾರೆ. ಹಾಗಾದ್ರೆ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.
ಮೈಕ್ರೋ ಫೈನಾನ್ಸ್ ಫೀಲ್ಡ್‌ನಲ್ಲಿ ಕೆಲಸ
ಹೌದು, ಚಿಕ್ಕಮಗಳೂರು ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿಯಲ್ಲಿ ಮೇ 8 ರಂದು ಬೆಳಿಗ್ಗೆ 10.30 ಗಂಟೆಗೆ ಖಾಸಗಿ ಕಂಪನಿಯಾದ ಬಿ.ಎಸ್.ಎಸ್, ಮೈಕ್ರೋ ಫೈನಾನ್ಸ್ ಲಿ.ಚಿಕ್ಕಮಗಳೂರು ತನ್ನಲ್ಲಿ ಖಾಲಿ ಇರುವ(ಟಿಸಿಒ ಮತು ಸಿಒ) ಹುದ್ದೆಗೆ ನೇರ ಸಂದರ್ಶನವನ್ನು ಏರ್ಪಡಿಸಿದ್ದಾರೆ. ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಅಥವಾ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ 18 ರಿಂದ 30 ವರ್ಷ ವಯೋಮಿತಿಯ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದು.
ಉಚಿತ ಪ್ರವೇಶವಿದ್ದು, ಅಭ್ಯರ್ಥಿಗಳು ಒಂದು ಸೆಟ್ ರೆಸ್ಯೂಮ್‌ನೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು (08262-295538/ 9945198500) ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.
Chikmagalur,Chikmagalur,Karnataka
Source link