[ad_1]
Last Updated:
ಕೇರಳದ ತಿರುವನಂತಪುರಂನಲ್ಲಿ ಮೂರು ಪ್ರತ್ಯೇಕ ಸ್ಥಳಗಳಲ್ಲಿ 23 ವರ್ಷದ ವ್ಯಕ್ತಿಯೊಬ್ಬ ತನ್ನ ಕುಟುಂಬದ ಐದು ಸದಸ್ಯರನ್ನ ಕೊಂದಿದ್ದಾನೆ. ತನ್ನ ಸಹೋದರ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಗೆಳತಿ ಸೇರಿದಂತೆ ತನ್ನ ಕುಟುಂಬದವರನ್ನ ಕೊಂದು ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
Kerala: ತಿರುವನಂತಪುರಂ (Thiruvananthapuram) ಜಿಲ್ಲೆಯ ಮೂರು ಹಳ್ಳಿಗಳಲ್ಲಿ 23 ವರ್ಷದ ವ್ಯಕ್ತಿ ಅಫಾನ್ (Afan) ಎಂಬಾತ ಕುಟುಂಬ ಸದಸ್ಯರಾದ ಐದು ಜನರನ್ನ ಕೊಂದಿದ್ದಾನೆ (Murder). ಅವರಲ್ಲಿ ನಾಲ್ವರು ಅವರ ಆಪ್ತ ಕುಟುಂಬ ಸದಸ್ಯರು ಮತ್ತ ಒಬ್ಬಳು ಗೆಳತಿ ಎನ್ನಲಾಗಿದೆ. ತಾನೇ ಎಲ್ಲರನ್ನು ಕೊಂದು ಕೊನೆಗೆ ತನ್ನ ತಾಯಿ, ಹದಿಹರೆಯದ ಸಹೋದರ ಮತ್ತು ಗೆಳತಿ ಸೇರಿದಂತೆ ಆರು ಜನರನ್ನು ಕೊಂದಿರುವುದಾಗಿ ಹೇಳಿಕೊಂಡು ಶರಣಾಗಿದ್ದಾನೆ. ಅಲ್ಲದೇ ಕೊಲೆ ಮಾಡಿ ತಾನೂ ಕೂಡ ವಿಷ (Poison) ಸೇವಿಸಿರೋದಾಗಿ ಪೊಲೀಸರಿಗೆ ತಿಳಿಸಿದ್ದು ತಕ್ಷಣ ಪೊಲೀಸರು ಆರೋಪಿಯನ್ನ ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆರೋಪಿ ಅಫಾನ್ ವೆಂಜರಮೂಡು ಪೊಲೀಸ್ ಠಾಣೆಗೆ ಬಂದು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡ ನಂತರ ಹಗಲಿನಲ್ಲಿ ನಡೆದ ಸರಣಿ ಕೊಲೆಗಳು ರಾತ್ರಿ ಬೆಳಕಿಗೆ ಬಂದಿದೆ. ನಂತರ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದಾಗ ಐದು ಜನರು ಸಾವನಪ್ಪಿರೋದು ದೃಢ ಪಡಿಸಲಾಗಿದೆ. ಇನ್ನೂ ಆತನ ತಾಯಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಐವರು ಕುಟುಂಬ ಸದಸ್ಯರ ಕೊಲೆ
ಆರೋಪಿ ಅಫಾನ್ ತನ್ನ 13 ವರ್ಷದ ಸಹೋದರ ಅಹಸನ್, ಅಜ್ಜಿ ಸಲ್ಮಾ ಬೀವಿ, ತಂದೆಯ ಚಿಕ್ಕಪ್ಪ ಲತೀಫ್, ಚಿಕ್ಕಮ್ಮ ಶಾಹಿಹಾ ಮತ್ತು ಆತನ ಗೆಳತಿ ಫರ್ಶಾನಾಳನ್ನ ಕೊಂದಿರೋದಾಗಿ ಬೆಳಕಿಗೆ ಬಂದಿದೆ. ಈ ವೇಳೆ ತನ್ನ ತಾಯಿ ಮೇಲೂ ಹಲ್ಲೆ ಮಾಡಿದ್ದು, ತಾಯಿಗೆ ಗಂಭೀರ ಗಾಯಗಳಾಗಿವೆ. ಅವನ ತಾಯಿ, ಕ್ಯಾನ್ಸರ್ ರೋಗಿ ಶೆಮಿ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇನ್ನೂ ಆರೋಪಿ ಅಫಾನ್ ತಂದೆ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ.
ಘಟನೆ ಬಗ್ಗೆ ತಿರುವನಂತಪುರಂ ಗ್ರಾಮೀಣ ಎಸ್ಪಿ ಕೆ.ಎಸ್. ಸುದರ್ಶನ್ ಮಾತನಾಡಿ, ಐದು ಸಾವುಗಳು ದೃಢಪಟ್ಟಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಎರಡು ಪೊಲೀಸ್ ಠಾಣೆಗಳಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ರು. “ಅವರ ಹೇಳಿಕೆಯನ್ನು ವಿವರವಾಗಿ ದಾಖಲಿಸಿದ ನಂತರವೇ ಕೊಲೆಯ ಉದ್ದೇಶವನ್ನು ಖಚಿತಪಡಿಸಿಕೊಳ್ಳಬಹುದು. ಪ್ರಾಥಮಿಕ ತನಿಖೆಯಲ್ಲಿ ಹಣಕಾಸಿನ ಸಮಸ್ಯೆಗಳ ಬಗ್ಗೆ ಸೂಚನೆಗಳಿವೆ ಮತ್ತು ಚಿನ್ನ ಕಾಣೆಯಾಗಿದೆ ಎಂದು ವರದಿಯಾಗಿದೆ. ಅಂತಹ ಅಂಶಗಳನ್ನು ಪರಿಶೀಲಿಸಬೇಕಾಗಿದೆ. ಅಪರಾಧ ಸ್ಥಳದಿಂದ ಸುತ್ತಿಗೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ರು.
ಬೆಳಗ್ಗೆಯಿಂದ ಸಂಜೆವರೆಗೆ 3 ಸ್ಥಳಗಳಲ್ಲಿ 5 ಕೊಲೆ
ಬೆಳಿಗ್ಗೆ 10 ಗಂಟೆಯಿಂದ ಸಂಜೆ ಆರು ಗಂಟೆಯ ನಡುವೆ ಕೊಲೆಗಳು ನಡೆದಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ತನಿಖೆ ಪ್ರಕಾರ ಅಫಾನ್ ಮೊದಲು ಪಾಂಗೋಡ್ ಮೂಲದ ತನ್ನ ಅಜ್ಜಿ ಸಲ್ಮಾ ಬೀವಿಯನ್ನು ಬೆಳಿಗ್ಗೆ ಕೊಂದಿದ್ದಾನೆ. ನಂತರ ಅವನು ಎಸ್‌ಎನ್ ಪುರಂನ ಮತ್ತೊಂದು ಹಳ್ಳಿಗೆ ಪ್ರಯಾಣ ಬೆಳೆಸಿ ತಂದೆ ರಹೀಮ್‌ನ ಸಹೋದರ ಲತೀಫ್ ಮತ್ತು ಅವನ ಹೆಂಡತಿ ಶಾಹಿದಾಳನ್ನ ಕೊಂದಿದ್ದಾನೆ. ನಂತರ ಅವನ 13 ವರ್ಷದ ಕಿರಿಯ ಸಹೋದರ ಅಫ್ಸಾನ್ ಮತ್ತು ಗೆಳತಿ ಫರ್ಸಾನಾ ಅವರನ್ನು ಹೊಡೆದು ಕೊಂದಿದ್ದಾನೆ. ಈ ವೇಳೆ ತಾಯಿಯ ಮೇಲೂ ದಾಳಿ ನಡೆದಿದ್ದು, ಅವರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ತಿರುವನಂತಪುರಂ ಜಿಲ್ಲಾ ಪಂಚಾಯತ್ ಸದಸ್ಯ ಬಿನು ಎಸ್ ನಾಯರ್ ಮಾತನಾಡಿ, ಶಂಕಿತನ ಮನೆಯಲ್ಲಿ ಪತ್ತೆಯಾದ ಶವಗಳ ತಲೆಯಲ್ಲಿ ತೀವ್ರ ಗಾಯಗಳಾಗಿವೆ. ಕೊಲೆಗಳಿಗೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಆದರೂ, ಅಫಾನ್‌ನ ಸ್ನೇಹಿತೆ ಫರ್ಸಾನಾ ಕಳೆದ ಎರಡು ದಿನಗಳಿಂದ ಮನೆಯಲ್ಲಿದ್ದಳು. ಇದೇ ಕಾರಣದಿಂದಾಗಿ ಕುಟುಂಬದಲ್ಲಿ ಕೆಲ ಸಮಸ್ಯೆಗಳಿದ್ದವು ಎಂದಿದ್ದಾರೆ. ಜೊತೆಗೆ ಆರೋಪಿ ಅಫಾನ್ಗೆ ಯಾವುದೆ ಅಪರಾಧ ಚಟುವಟಿಕೆಗಳು ಅಥವಾ ಮಾದಕ ವಸ್ತುಗಳ ಸೇವನೆಯ ಯಾವುದೇ ಇತಿಹಾಸವಿರಲಿಲ್ಲ ಎಂದು ಹೇಳಿದರು.
February 25, 2025 11:40 AM IST
Source link