[ad_1]
ಒಂದೊಂದು ರಾಜ್ಯದಲ್ಲಿ ಒಂದೊಂದು ಸ್ಟ್ರೀಡ್‌ಫುಡ್ ಫೇಮಸ್ ನಮ್ಮಲ್ಲಿ. ಹಾಗಿದ್ರೆ ಇಲ್ಲಿ ದೇಶದಾದ್ಯಂತ ಸ್ಟ್ರೀಡ್‌ಫುಡ್‌ಗಳಿಗೆ ಹಾಟ್‌ಸ್ಪಾಟ್ ಆಗಿರುವ ಕೆಲ ತಾಣಗಳು ಯಾವುವು ಅಂತಾ ನೋಡೋಣ.
ಭಾರತದ 8 ಅತ್ಯುತ್ತಮ ಸ್ಟ್ರೀಡ್‌ಫುಡ್ ಡೆಸ್ಟಿನೇಷನ್
ದೆಹಲಿ – ಸ್ಟ್ರೀಟ್ ಫುಡ್ ಕ್ಯಾಪಿಟಲ್
ದೆಹಲಿಯನ್ನು ಬೀದಿ ಆಹಾರದ ರಾಜಧಾನಿ ಅಂದ್ರೆ ತಪ್ಪಾಗಲ್ಲ. ಇಲ್ಲಿ ಸಿಗುವ ಚೋಲೆ ಬಟೂರೆನಿಂದ ಹಿಡಿದು ಗರಿಗರಿಯಾದ ಗೋಲ್‌ಗಪ್ಪಾದವರೆಗೆ ಅನೇಕ ಬಗೆಗಳಿವೆ. ದೆಹಲಿಗೆ ಹೋದರೆ ಸ್ಟ್ರೀಟ್‌ಫುಡ್ ಸವಿಯಲು ಚಾಂದಿನಿ ಚೌಕ್ ಮತ್ತು ಕನ್ನಾಟ್ ಪ್ಲೇಸ್‌ಗೆ ಮಿಸ್ ಮಾಡದೇ ಹೋಗಬೇಕು.

ಮುಂಬೈ – ವಡಾ ಪಾವ್
ಮುಂಬೈನ ಗದ್ದಲದ ಬೀದಿಗಳ ನಡುವೆಯೇ ಘಮಘಮಿಸೋದು ಇಲ್ಲಿ ಸಿಗುವ ಆಹಾರಗಳು. ವಡಾ ಪಾವ್, ಪಾವ್ ಭಾಜಿ ಮತ್ತು ಮಿಸಲ್ ಪಾವ್‌ನಂತಹ ಅನೇಕ ಆಹಾರಗಳು ನಾಲಿಗೆಯನ್ನು ತೃಪ್ತಿ ಪಡಿಸುತ್ತವೆ.

ಸ್ಟ್ರೀಟ್‌ಫುಡ್‌ಗೆ ಜುಹು ಬೀಚ್ ಹಾಟ್‌ಸ್ಪಾಟ್ ಆಗಿದ್ದು, ಸ್ಥಳೀಯರು ಮತ್ತು ಪ್ರವಾಸಿಗರು ನಗರದ ವೈವಿಧ್ಯಮಯ ಬೀದಿ ಆಹಾರ ಸಂಸ್ಕೃತಿಯನ್ನು ಇಲ್ಲಿ ಆನಂದಿಸಬಹುದು.
ಕೋಲ್ಕತ್ತಾ – ದಿ ಲ್ಯಾಂಡ್ ಆಫ್ ರೋಲ್ಸ್ & ಜಲ್ಮುರಿ
ಕೋಲ್ಕತ್ತಾದ ಸ್ಟ್ರೀಟ್‌ಫುಡ್ ಗರಿಗರಿಯಾದ ಪುಚ್ಕಾಗಳಿಂದ ಮಸಾಲೆಯುಕ್ತ ಕಥಿ ರೋಲ್‌ಗಳವರೆಗೆ ಎಲ್ಲವಕ್ಕೂ ಫೇಮಸ್. ಪಾರ್ಕ್ ಸ್ಟ್ರೀಟ್ ಮತ್ತು ನ್ಯೂ ಮಾರ್ಕೆಟ್‌ನಲ್ಲಿ ನಿಮಗೆ ಇಷ್ಟವಾಗುವ ಎಲ್ಲಾ ಬಗೆಯ ರೋಲ್‌ಗಳು, ಜಲ್ಮುರಿಗಳು ಸಿಗುತ್ತವೆ.

ಲಕ್ನೋ – ಕುಲ್ಫಿ ಫಲೂದಾ
ಲಕ್ನೋದ ಬೀದಿಗಳು ಆಹಾರ ಪ್ರಿಯರಿಗೆ ಸ್ವರ್ಗವಾಗಿದ್ದು, ಬಾಯಲ್ಲಿ ನೀರೂರಿಸುವ ಟುಂಡೆ ಕಬಾಬ್‌ಗಳು, ಬಾಸ್ಕೆಟ್ ಚಾಟ್ ಮತ್ತು ಕುಲ್ಫಿ ಫಲೂದಾಗಳು ನಿಮಗಿಲ್ಲಿ ಲಭ್ಯವಾಗುತ್ತವೆ. ಲಕ್ನೋದಲ್ಲಿ ಅಮೀನಾಬಾದ್ ಮತ್ತು ಹಜರತ್‌ಗಂಜ್ ಸ್ಟ್ರೀಟ್‌ಫುಡ್‌ಗಳಿಗೆ ಫೇಮಸ್ ಆದ ಡೆಸ್ಟಿನೇಷನ್‌ಗಳಾಗಿವೆ.
ಹೈದರಾಬಾದ್ – ಮಸಾಲೆಗಳು ಮತ್ತು ರುಚಿಗಳು
ಹೈದರಾಬಾದ್‌ನ ಬೀದಿ ಆಹಾರವು ಆರೊಮ್ಯಾಟಿಕ್ ಬಿರಿಯಾನಿ, ಹಲೀಮ್ ಮತ್ತು ಇರಾನಿ ಚಾಯ್‌ನಿಂದ ಶ್ರೀಮಂತಗೊಂಡಿದೆ. ಚಾರ್ಮಿನಾರ್ ಮತ್ತು ಸಿಂಧಿ ಕಾಲೋನಿಗಳು ಅಧಿಕೃತವಾದ ಸ್ಥಳೀಯ ರುಚಿಯನ್ನು ನಿಮಗೆ ನೀಡುತ್ತವೆ.

ಮಟನ್ ಬಿರಿಯಾನಿ
ಚೆನ್ನೈ – ದಕ್ಷಿಣ ಭಾರತದ ಬೀದಿ ಆಹಾರ
ಚೆನ್ನೈನ ಬೀದಿ ಆಹಾರವು ಗರಿಗರಿಯಾದ ದೋಸೆ, ಮೃದುವಾದ ಇಡ್ಲಿ ಮತ್ತು ಕರಾವಳಿ ವಿಶೇಷತೆಗಳ ಮಿಶ್ರಣವನ್ನು ಉಣಬಡಿಸುತ್ತದೆ. ಮರೀನಾ ಬೀಚ್ ಮತ್ತು ಸೌಕಾರ್ಪೆಟ್ ಚೆನ್ನೈನ ಹಾಟ್‌ಸ್ಪಾಟ್ ಆಗಿದ್ದು ಒಮ್ಮೆಯಾದರೂ ಇಲ್ಲಿ ಸಿಗುವ ಆಹಾರಗಳನ್ನು ನೀವು ಟೇಸ್ಟ್ ಮಾಡಬೇಕು.

ಇಡ್ಲಿ-ಸಾಂಬಾರ್
ಅಮೃತಸರ – ಆಹಾರ ಪ್ರಿಯರ ಸ್ವರ್ಗ
ಅಮೃತಸರದ ಬೀದಿ ಆಹಾರವು ಕುಲ್ಚಾಗಳಿಂದ ಕೆನೆ ಲಸ್ಸಿಯವರೆಗೆ ಸಮೃದ್ಧವಾಗಿದೆ. ಹಾಲ್ ಬಜಾರ್ ಮತ್ತು ಕೇಸರ್ ದಾ ಧಾಬಾ ಇಲ್ಲಿ ಭೇಟಿ ನೀಡಲೇಬೇಕಾದ ಸ್ಥಳಗಳಾಗಿವೆ.

ಇಂದೋರ್ – ಫುಡೀಸ್ ಪ್ಯಾರಡೈಸ್
ಇಂದೋರ್‌ನ ಬೀದಿ ಆಹಾರ, ಪೋಹಾ ಜಲೇಬಿಯಿಂದ ಹಿಡಿದು ಹತ್ತಾರು ಬಗೆಯ ಆಹಾರಗಳನ್ನು ಹೊಂದಿದೆ. ಸರಾಫಾ ಬಜಾರ್‌ಗೆ ಹೋದ್ರೆ ಮಿಡ್‌ನೈಟ್‌ವರೆಗೂ ನಿಮಗೆ ಸ್ಟ್ರೀಟ್‌ಫುಡ್‌ಗಳು ಇಲ್ಲಿ ಲಭ್ಯವಾಗುತ್ತವೆ.

ಸಿಹಿ ತಿಂಡಿಗಳನ್ನು ತ್ಯಜಿಸಿ: ತೂಕ ಇಳಿಸಿಕೊಳ್ಳಲು ಅತ್ಯಂತ ವೇಗವಾದ ಮಾರ್ಗವೆಂದರೆ ನಿಮ್ಮ ಆಹಾರದಿಂದ ಸಕ್ಕರೆಯನ್ನು ದೂರವಿಡುವುದು ಅಥವಾ ಕಡಿಮೆ ಮಾಡುವುದು. ನಿಮ್ಮ ಹೊಟ್ಟೆ ಬೇಗನೆ ಕರಗಿಸಿಕೊಳ್ಳಲು ಬಯಸಿದರೆ, ನೀವು ಸಕ್ಕರೆ ಸೇವನೆಯನ್ನು ಕಡಿಮೆ ಮಾಡಬೇಕಾಗುತ್ತದೆ. ವಾಸ್ತವವಾಗಿ, ಸಕ್ಕರೆ ಚಯಾಪಚಯ ದರವನ್ನು ನಿಧಾನಗೊಳಿಸುತ್ತದೆ. ಇದು ತೂಕ ಇಳಿಸಿಕೆಗೂ ಸಹಾಯ ಮಾಡುತ್ತೆ. ಸಕ್ಕರೆ ಅಂಶವನ್ನು ಹೊಂದಿರುವ ಆಹಾರಗಳನ್ನು ತ್ಯಜಿಸಿ. ನಿಮಗೆ ಸಿಹಿ ಏನಾದರೂ ತಿನ್ನಬೇಕೆಂದು ಅನಿಸಿದರೆ, ನಿಮ್ಮ ಹಸಿವನ್ನು ನೀಗಿಸಲು ಬೆಲ್ಲ ಮತ್ತು ಜೇನುತುಪ್ಪದಂತಹ ಪದಾರ್ಥಗಳನ್ನು ಆರಿಸಿ.
ಇಂದೋರ್‌ನ ಛಪ್ಪನ್ ಡುಕನ್ ನಗರವು ಮಸಾಲೆಯುಕ್ತ, ಸಿಹಿ ಮತ್ತು ಅತ್ಯಾಕರ್ಷಕ ಮಿಶ್ರಣವನ್ನು ನೀಡುತ್ತದೆ.
ಹೀಗೆ ದೇಶದ ಎಲ್ಲಾ ಕಡೆ ಒಂದೊಂದು ಫುಡ್ ಫೇಮಸ್ ಆಗಿದ್ದು, ಸ್ಟ್ರೀಟ್ ಫುಡ್ ಅನ್ನು ಮನಸಾರೆ ಸವಿಯಬೇಕು ಅಂದ್ರೆ ಮೇಲಿನ ಈ ಜಾಗಗಳಿಗೆ ಭೇಟಿ ನೀಡಿ.
Bangalore,Karnataka
February 22, 2025 1:02 PM IST
Source link