ನಾಳೆ SSLC ಪರೀಕ್ಷಾ ಫಲಿತಾಂಶ! ಆನ್‌ಲೈನ್‌‌ನಲ್ಲಿ ಈಸಿಯಾಗಿ ಹೀಗೆ ಚೆಕ್ ಮಾಡಿ | May 2 SSLC 2025 exam results announced Check online like this

[ad_1]

Last Updated:

ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿಗಳು ಬಹಳ ಮಹತ್ವದ ಹಂತವಾಗಿರುತ್ತೆ. ಈಗಾಗಲೇ ಪರೀಕ್ಷೆಗಳು ಮುಗಿದಿದೆ. ಉತ್ತರ ಪತ್ರಿಕೆ ಮೌಲ್ಯಮಾಪನವೂ ಮುಗಿದಿದೆ. ಇದೀಗ ವಿದ್ಯಾರ್ಥಿಗಳು ಮಾರ್ಕ್ಸ್‌ ಎಷ್ಟು ಬರಬಹುದು ಎಂಬ ಕುತೂಹಲದಲ್ಲಿದ್ದಾರೆ. ಕೊನೆಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ನಾಳೆ ಪ್ರಕಟವಾಗಲಿದೆ.

SSLC ಪರೀಕ್ಷಾ ಫಲಿತಾಂಶSSLC ಪರೀಕ್ಷಾ ಫಲಿತಾಂಶ
SSLC ಪರೀಕ್ಷಾ ಫಲಿತಾಂಶ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಮಾರ್ಚ್-ಏಪ್ರಿಲ್ 2025ರಲ್ಲಿ ನಡೆಸಿದ 10ನೇ ತರಗತಿ (SSLC Results) ಫಲಿತಾಂಶವನ್ನು ನಾಳೆ ಅಂದರೆ ಶುಕ್ರವಾರ, ಮೇ 2, 2025 ರಂದು ಪ್ರಕಟಿಸಲಿದೆ. ಈ ವರ್ಷ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಿದ್ದು, ರಾಜ್ಯಾದ್ಯಂತ ಸುಮಾರು 2,800 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಮೌಲ್ಯಮಾಪನ ಕಾರ್ಯವನ್ನು ಈಗಾಗಲೇ ಪೂರ್ಣಗೊಳಿಸಿರುವ KSEAB, ಫಲಿತಾಂಶವನ್ನು ಆನ್‌ಲೈನ್‌ನಲ್ಲಿ (Online Results) ಪ್ರಕಟಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. 

ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿಗಳು ಬಹಳ ಮಹತ್ವದ ಹಂತವಾಗಿರುತ್ತೆ. ಈಗಾಗಲೇ ಪರೀಕ್ಷೆಗಳು ಮುಗಿದಿದೆ. ಉತ್ತರ ಪತ್ರಿಕೆ ಮೌಲ್ಯಮಾಪನವೂ ಮುಗಿದಿದೆ. ಇದೀಗ ವಿದ್ಯಾರ್ಥಿಗಳು ಮಾರ್ಕ್ಸ್‌ ಎಷ್ಟು ಬರಬಹುದು ಎಂಬ ಕುತೂಹಲದಲ್ಲಿದ್ದಾರೆ. ಕೊನೆಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ನಾಳೆ ಪ್ರಕಟವಾಗಲಿದೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಈ ವರ್ಷದ ಪರೀಕ್ಷೆಯು ಮಾರ್ಚ್ 21, 2025 ರಿಂದ ಏಪ್ರಿಲ್ 4, 2025 ರವರೆಗೆ ನಡೆಯಿತು. ಪರೀಕ್ಷೆಯು ಒಂದೇ ವೇಳಾಪಟ್ಟಿಯಲ್ಲಿ, ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:15 ರವರೆಗೆ ನಡೆಸಲಾಯಿತು. ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸಮಯವನ್ನು ನೀಡಲಾಗಿತ್ತು. ಇನ್ನು ಈ ಬಾರಿ ರಾಜ್ಯಾದ್ಯಂತ ಸುಮಾರು 8,96,447 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾರೆ, ಇದರಲ್ಲಿ 4,61,563 ಬಾಲಕರು ಮತ್ತು 4,34,884 ಬಾಲಕಿಯರು ಸೇರಿದ್ದಾರೆ. ಈ ಸಂಖ್ಯೆಯು ಕಳೆದ ವರ್ಷಕ್ಕಿಂತ ಸ್ವಲ್ಪ ಏರಿಕೆಯನ್ನು ತೋರಿಸಿದೆ.

SSLC ಪರೀಕ್ಷಾ ಫಲಿತಾಂಶ

ನಾಳೆ ರಿಸಲ್ಸ್ ಅನೌನ್ಸ್

ಎಸ್​​ಎಸ್ಎಲ್​ಸಿ ಫಲಿತಾಂಶ ಬಿಡುಗಡೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸನ್ನದ್ದವಾಗಿದೆ. ನಾಳೆ ಬೆಳಗ್ಗೆ ರಿಸಲ್ಟ್ ಬಿಡುಗಡೆಗೆ ಮಂಡಳಿ ಸಿದ್ದತೆ ಮಾಡಿಕೊಂಡಿದೆ. ನಾಳೆಗೆ ಬೆಳಗ್ಗೆ 10:30ಕ್ಕೆ ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 6ನೇ ಅಡ್ಡರಸ್ತೆ ಮಲ್ಲೇಶ್ವರಂನಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ. http://karresults.nic.in ವೆಬ್​​ಸೈಟ್​ನಲ್ಲೂ ಬೆಳಗ್ಗೆ 10:30ರ ನಂತರ ಫಲಿತಾಂಶವನ್ನು ವೀಕ್ಷಣೆ ಮಾಡಬಹುದಾಗಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಮೊಬೈಲ್‌ನಲ್ಲಿ ನೋಡಲು ಇಲ್ಲಿದೆ ಟಿಪ್ಸ್

  • ನಿಮ್ಮ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್‌ನಲ್ಲಿ ಗೂಗಲ್ ಕ್ರೋಮ್ ಓಪನ್ ಮಾಡಿ.
  • ನಂತರ ಅಧಿಕೃತ ವೆಬ್ಸೈಟ್ https://karresults.nic.in/ ಗೆ ಭೇಟಿ ನೀಡಿ
  • ಮುಖಪುಟದಲ್ಲಿ SSLC Results 2025 ಲಿಂಕ್ ಅನ್ನು ಕ್ಲಿಕ್ ಮಾಡಿ
  • ಹೊಸ ಲಾಗಿನ್ ಪುಟವು ತೆರೆಯುತ್ತದೆ
  • ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
  • ಆಗ ಫಲಿತಾಂಶ ಕಾಣಿಸಿಕೊಳ್ಳುತ್ತದೆ
  • ಅಲ್ಲಿ ನಿಮ್ಮ ಮಾರ್ಕ್ಸ್‌ ಕಾರ್ಡ್‌ ಅನ್ನು ಡೌನ್ಲೋಡ್ ಮಾಡುವ ಅವಕಾಶವಿದೆ
  • [ad_2]
    Source link

    Leave a Comment