ಕರ್ನಾಟಕದ ರೈತನ ಮಗ ಯುಪಿಎಸ್‌ಸಿ ಟಾಪರ್‌! ಸತತ 5ನೇ ಪ್ರಯತ್ನದಲ್ಲಿ ಕಠಿಣ ಪರೀಕ್ಷೆಯಲ್ಲಿ ಸಕ್ಸಸ್‌ | Bagalkot Farmers Son Pandurang Secures 529th Rank in UPSC Exam success story

[ad_1]

Last Updated:

ಇದೀಗ ಈ ಬಾರಿಯ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ಯುವಕ ಪಾಂಡುರಂಗ ಸದಾಶಿವ ಕಂಬಳಿ ಅವರು ಯುನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) ಪರೀಕ್ಷೆಯಲ್ಲಿ 529ನೇ ರ್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಪಾಂಡುರಂಗ ಸದಾಶಿವ ಕಂಬಳಿಪಾಂಡುರಂಗ ಸದಾಶಿವ ಕಂಬಳಿ
ಪಾಂಡುರಂಗ ಸದಾಶಿವ ಕಂಬಳಿ

ಬಾಗಲಕೋಟೆ: UPSC ನಾಗರಿಕ ಸೇವೆಗಳ ಪರೀಕ್ಷೆಯ 2024ನೇ ಸಾಲಿನ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಇದನ್ನು upsc.gov.in ಗೆ ಭೇಟಿ ನೀಡುವ ಮೂಲಕ ಪರಿಶೀಲಿಸಬಹುದು. UPSC ಫಲಿತಾಂಶ ಪ್ರಕಟವಾದ ಹಿನ್ನೆಲೆ ಹಲವಾರು ಜನರು ತುಂಬಾ ಉತ್ಸಾಹದಿಂದ ಫಲಿತಾಂಶ ಚೆಕ್ ಮಾಡುತ್ತಿದ್ದಾರೆ. ಹಾಗೇ ಯಾರು ಈ ಬಾರಿ ಅಗ್ರಸ್ಥಾನ ಗಳಿಸಿದ್ದಾರೆ ಎಂಬ ಕುತೂಹಲವನ್ನು ಇಟ್ಟುಕೊಂಡು ಅದಕ್ಕಾಗಿ ಹುಡುಕಾಟ ನಡೆಸುತ್ತಾ ಇದ್ದಾರೆ. ಈ ಬಾರಿ ಶಕ್ತಿ ದುಬೆ ಎಂಬವರು ಯುಪಿಎಸ್‌ಸಿಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಯುಪಿಎಸ್‌ಸಿ ಒಟ್ಟು 1009 ಅಭ್ಯರ್ಥಿಗಳ ನೇಮಕಕ್ಕೆ ಶಿಫಾರಸ್ಸು ಮಾಡಲಾಗಿದೆ.

ಇದೀಗ ಈ ಬಾರಿಯ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ಯುವಕ ಪಾಂಡುರಂಗ ಸದಾಶಿವ ಕಂಬಳಿ ಅವರು ಯುನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) ಪರೀಕ್ಷೆಯಲ್ಲಿ 529ನೇ ರ್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ರೈತನ ಮಗನ ಯುಪಿಎಸ್‌ಸಿ ಸಾಧನೆ

ರೈತನ ಮಗನಾಗಿರುವ ಪಾಂಡುರಂಗ ಅವರ ಈ ಯಶಸ್ಸು ಗ್ರಾಮೀಣ ಕರ್ನಾಟಕದ ಯುವಕರಿಗೆ ಸ್ಫೂರ್ತಿಯಾಗಿದೆ. ಪಾಂಡುರಂಗ ಕಂಬಳಿ ಅವರು ಕಳೆದ ಒಂದು ವರ್ಷದಿಂದ ಐಎಫ್‌ಎಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಹಾರಾಷ್ಟ್ರ ಕೇಡರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸತತ ಐದನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ಅವರು, ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಈ ಸಾಧನೆಯನ್ನು ಮಾಡಿದ್ದಾರೆ.

ಪಾಂಡುರಂಗ ಸದಾಶಿವ ಕಂಬಳಿ

ಪಾಂಡುರಂಗ ಅವರ ಕುಟುಂಬ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದು, ಈ ಸಾಧನೆಯಿಂದ ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದು ದೇಶದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಕಂಡಿರುವ ಪಾಂಡುರಂಗ ಅವರ ಕತೆ, ಯುವ ಪೀಳಿಗೆಗೆ ದೊಡ್ಡ ಪ್ರೇರಣೆಯಾಗಿದೆ.

ಈ ಸಾಧನೆಯ ಬಗ್ಗೆ ಸ್ಥಳೀಯರು ಹೆಮ್ಮೆ ವ್ಯಕ್ತಪಡಿಸಿದ್ದು, ಪಾಂಡುರಂಗ ಅವರ ಭವಿಷ್ಯದ ಸೇವೆಯು ದೇಶಕ್ಕೆ ಮಾದರಿಯಾಗಲಿ ಎಂದು ಹಾರೈಸಿದ್ದಾರೆ.

UPSC 2024ರ ಟಾಪ್ 10 ಅಭ್ಯರ್ಥಿಗಳ ಪಟ್ಟಿ

  • ಶಕ್ತಿ ದುಬೆ
  • ಹರ್ಷಿತಾ ಗೋಯೆಲ್
  • ಡೋಂಗ್ರೆ ಅರ್ಚಿತ್ ಪರಾಗ್ಶಾ
  • ಮಾರ್ಗಿ ಚಿರಾಗ್
  • ಆಕಾಶ್ ಗರ್ಗ್
  • ಕೋಮಲ್ ಪುನಿಯಾ
  • ಆಯುಷಿ ಬನ್ಸಾಲ್
  • ರಾಜ್‌ಕೃಷ್ಣ ಝಾ
  • ಆದಿತ್ಯ ವಿಕ್ರಮ್ ಅಗರ್ವಾಲ್
  • ಮಾಯಾಂಕ್ ತ್ರಿಪಾಠಿ
  • [ad_2]
    Source link

    Leave a Comment