ಈ ಮಶ್ರೂಮ್ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ; ಅಂತಹದ್ದೇನಿದೆ ತಿಳಿದ್ರೆ ಬೆಚ್ಚಿ ಬೀಳ್ತೀರಿ! | Hyderabad Store Sells special One Mushroom Worth 5 Lakhs

[ad_1]

Last Updated:

ಹೈದರಾಬಾದ್‌ನ ಸಿಟಿ ಫುಡ್ ಸ್ಟೋರ್‌ನಲ್ಲಿ ಅಪರೂಪದ 5.5-6 ಕೆಜಿ ಅಣಬೆಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಅಂಗಡಿಗೆ ಬರುವ ಗ್ರಾಹಕರು ಈ ಅಣಬೆಯನ್ನು ಕಂಡು ಬೆರಗಾಗಿ ಅದರ ಫೋಟೋವನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿ ಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಜನ ಈ ಮಶ್ರೂಮ್​ ಬೆಲೆ ಕೇಳಿ ಬಾಯಿ ಮೇಲೆ ಬೆರಳಿಟ್ಟುಕೊಂಡು ಗಪ್​-ಚುಪ್​ ರೀತಿ ಶಾಕ್ ಆಗಿದ್ದಾರೆ.

ಸಾಂದರ್ಭಿಕ ಚಿತ್ರಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಶಾಪಿಂಗ್ ಮಾಲ್‌ಗಳು (Shopping Mall) ಮತ್ತು ಆಹಾರ ಮಳಿಗೆಗಳಲ್ಲಿ (Food Shops) ನಾನಾ ವಸ್ತುಗಳನ್ನು ಪ್ರದರ್ಶನಕ್ಕಾಗಿ ಇಡಲಾಗುತ್ತದೆ. ಆದರೆ, ಇತ್ತೀಚೆಗೆ, ಹೈದರಾಬಾದ್‌ನ (Hydrabad) ಸಿಟಿ ಫುಡ್ ಸ್ಟೋರ್‌ನಲ್ಲಿ ಅಪರೂಪದ 5.5-6 ಕೆಜಿ ಅಣಬೆಯನ್ನು (Mushroom) ಪ್ರದರ್ಶನಕ್ಕೆ ಇಡಲಾಗಿತ್ತು. ಅಂಗಡಿಗೆ ಬರುವ ಗ್ರಾಹಕರು ಅಣಬೆಯನ್ನು ಕಂಡು ಬೆರಗಾಗಿ ಅದರ ಫೋಟೋವನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿ ಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಜನ ಈ ಮಶ್ರೂಮ್​ ಬೆಲೆ ಕೇಳಿ ಬಾಯಿ ಮೇಲೆ ಬೆರಳಿಟ್ಟುಕೊಂಡು ಗಪ್​-ಚುಪ್​ ರೀತಿ ಶಾಕ್ ಆಗಿದ್ದಾರೆ.

ಹೌದು, ರೀಶಿ ಮಶ್ರೂಮ್ಸ್ ಎಂದು ಕರೆಯಲ್ಪಡುವ ಈ ಅಣಬೆಯ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ. ಇನ್ನೂ ಈ ಮಶ್ರೂಮ್ ಬೆಲೆ ಕೇಳಿದ ಗ್ರಾಹಕರು ನಂಬಲಸಾಧ್ಯವೆಂಬಂತೆ ಆಶ್ಚರ್ಯಕ್ಕೊಳಗಾಗಿದ್ದಾರೆ. ಅಷ್ಟಕ್ಕೂ ಈ ಮಶ್ರೂಮ್​ ಏಕಿಷ್ಟು ದುಬಾರಿ? ಇದರಲ್ಲಿರುವ ಅಂತಹ ವಿಶೇಷತೆ ಏನು ಎಂಬುವುದರ ಬಗ್ಗೆ ಕೆಲವೊಂದಷ್ಟು ಮಾಹಿತಿ ಈ ಕೆಳಕಂಡಂತಿದೆ ನೋಡಿ.

ರೀಶಿ ಮಶ್ರೂಮ್‌ನಲ್ಲಿ ಏನಿದೆ?

ರೀಶಿ ಮಶ್ರೂಮ್​ ಏಕೆ ಇಷ್ಟೊಂದು ದುಬಾರಿ ಎಂಬುವುದರ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆಗೆ ಮಾತನಾಡಿದ ಕ್ಲಿನಿಕಲ್ ಪೌಷ್ಟಿಕತಜ್ಞೆ ಮತ್ತು ಮಧುಮೇಹ ಶಿಕ್ಷಣತಜ್ಞೆ ಕನಿಕಾ ಮಲ್ಹೋತ್ರಾ ಅವರು, ರೀಶಿ ಮಶ್ರೂಮ್​ ವೈಜ್ಞಾನಿಕ (ಸೈಂಟಿಫಿಕ್) ಹೆಸರು ಗ್ಯಾನೋಡರ್ಮಾ ಲುಸಿಡಮ್. ಈ ಅಣಬೆಗಳನ್ನು ಸುಮಾರು 2,000 ವರ್ಷಗಳಿಂದ ಸಾಂಪ್ರದಾಯಿಕ ಏಷ್ಯನ್ ಔಷಧಗಳಲ್ಲಿ ಬಳಸಲಾಗುತ್ತಿದೆ. ಇವುಗಳನ್ನು ‘ಅಮರ ಅಣಬೆಗಳು’ ಎಂದು ಕರೆಯಲಾಗುತ್ತದೆ.

ಕೆಂಪು ಮತ್ತು ಕಪ್ಪು ಬಣ್ಣದಲ್ಲಿರುವ ಈ ಅಣಬೆ ಮೃದುವಾದ, ಮೇಣದಂಥ ರಚನೆಯನ್ನು ಹೊಂದಿದೆ. ಇದನ್ನು ಹೆಚ್ಚಾಗಿ ಚೈನೀಸ್ ಮತ್ತು ಜಪಾನೀಸ್ ಗಿಡಮೂಲಿಕೆ ಔಷಧಿಗಳಲ್ಲಿ ಬಳಸಲಾಗುತ್ತದೆ. ರೀಶಿ ಮಶ್ರೂಮ್​ ಸಾಮಾನ್ಯವಾಗಿ ಕಾಡಿನಲ್ಲಿ ಬೆಳೆಯುತ್ತವೆ. ಆದರೆ ಇವುಗಳನ್ನು ಬೆಳೆಸಲು ವಿಶೇಷ ಕಾಳಜಿ ವಹಿಸಬೇಕು. ಇದರ ಬಲವಾದ ಔಷಧೀಯ ಗುಣಗಳಿಂದಾಗಿ ಈ ಮಶ್ರೂಮ್​ಗೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಇದೆ ಎಂದು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ರೀಶಿ ಮಶ್ರೂಮ್ ಆರೋಗ್ಯ ಪ್ರಯೋಜನಗಳು

ರೀಶಿ ಮಶ್ರೂಮ್​ ಬೀಟಾ ಗ್ಲುಕನ್‌ಗಳು ಮತ್ತು ಟ್ರೈಟರ್ಪೆನಾಯ್ಡ್‌ಗಳಂತಹ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತವೆ. ಇವು ದೇಹಕ್ಕೆ ಹಲವು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಇದನ್ನು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ದೇಹದಲ್ಲಿನ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಅನೇಕ ಸೋಂಕುಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇವುಗಳೊಂದಿಗೆ ಇದರ ಔಷಧೀಯ ಗುಣಗಳು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ.

ಈ ಮಶ್ರೂಮ್ ಸೇವನೆಯಿಂದ ನೀವು ನೆಮ್ಮದಿಯಿಂದ ನಿದ್ರಿಸುತ್ತೀರಿ. ಇದು ನಿದ್ರಾಹೀನತೆಯಂತಹ ನಿದ್ರೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ನಿದ್ರೆಯ ಚಕ್ರಗಳನ್ನು ಸುಧಾರಿಸುತ್ತದೆ. ರೀಶಿ ಮಶ್ರೂಮ್​ ಬಲವಾದ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಇವು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತವೆ. ಜೊತೆಗೆ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಅಂದರೆ ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ತಿಳಿಸಿದೆ.

ಸಾಂದರ್ಭಿಕ ಚಿತ್ರ

ರೀಶಿ ಮಶ್ರೂಮ್​ ಅನಾನುಕೂಲಗಳು!

ರೀಶಿ ಅಣಬೆಗಳ ಆರೋಗ್ಯ ಪ್ರಯೋಜನಗಳನ್ನು ಒದಗಿಸುವುದಷ್ಟೇ ಅಲ್ಲ. ಇದರ ಅತಿಯಾದ ಸೇವನೆಯಿಂದ ಕೆಲವರು ಆರೋಗ್ಯ ಸಮಸ್ಯೆಗಳನ್ನು ಸಹ ಎದುರಿಸಬಹುದು. ಅಂದರೆ ಕೆಲವರಲ್ಲಿ ಅಲರ್ಜಿ ಮತ್ತು ದದ್ದುಗಳಂತಹ ಚರ್ಮದ ಸಮಸ್ಯೆಗಳು, ಉಸಿರಾಟದ ಸಮಸ್ಯೆ, ವಾಕರಿಕೆ ಅಥವಾ ಅತಿಸಾರ ಮತ್ತು ಹೊಟ್ಟೆ ಸಮಸ್ಯೆಗಳು ಉಂಟಾಗಬಹುದು.

ಇದು ರಕ್ತವನ್ನು ತೆಳುಗೊಳಿಸುವುದರಿಂದ, ಕಡಿಮೆ ಪ್ಲೇಟ್‌ಲೆಟ್ ಎಣಿಕೆ ಇರುವವರು ಇದನ್ನು ತಪ್ಪಿಸುವುದು ಉತ್ತಮ. ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರು ಇವುಗಳ ಸೇವನೆಯನ್ನು ತಪ್ಪಿಸಬೇಕು. ಅಲ್ಲದೇ ಈ ಮಶ್ರೂಮ್​ ಬಗ್ಗೆ ಇನ್ನೂ ಸಾಕಷ್ಟು ಸಂಶೋಧನೆಗಳು ನಡೆಯಬೇಕಾಗಿದೆ.

[ad_2]
Source link

Leave a Comment

Click on the Ads to continue browsing. (Support the Developer)
👇👇CLICK ADS WAIT & BACK👇👇